Kannada NewsLatest

ದೇವಸ್ಥಾನ ಜೀರ್ಣೋದ್ಧಾರ: ಶಾಸಕರ ನಿಧಿಯಿಂದ 6 ಲಕ್ಷ, ಸ್ವಂತ 2 ಲಕ್ಷ ರೂ ನೀಡಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಕ್ಕಿನಕೇರಿ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಮುಖ್ಯ ದ್ವಾರದ ಅಳವಡಿಕೆಗೆ (ಚೌಕಟ್ಟು)  ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಪೂಜೆ ನೆರವೇರಿಸಿದರು.
 ದೇವಸ್ಥಾನದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಲಕ್ಷ್ಮಿ ಹೆಬ್ಬಾಳಕರ್ ಸ್ವಂತ 2 ಲಕ್ಷ ರೂ, ಹಾಗೂ ಶಾಸಕರ ನಿಧಿಯ ವತಿಯಿಂದ 6 ಲಕ್ಷ ರೂ,ಗಳ ನೆರವು ನೀಡಿದ್ದಾರೆ. 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮಸ್ಥರು, ಸುಮಾರು ಐವತ್ತಕ್ಕೂ ಅಧಿಕ ಮಾಜಿ ಸೈನಿಕರು, ಡಾ. ನಿರಂಜನ ಕದಮ್, ಶಿವಾಜಿ ಬೊಗನ್, ಶಿವಾಜಿ ಪಾಟೀಲ, ದೇವಸ್ಥಾನದ ಕಮೀಟಿಯವರು, ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button