Belagavi NewsBelgaum NewsKannada NewsKarnataka NewsLatest

*ಫೆ‌. 5 ರಿಂದ ಬೆಳಗಾವಿಯಲ್ಲಿ ಬೆಲ್ಕಾನ್-2026 ಮೇಳ ಆಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ‘ಬೆಲ್ಕಾನ್-2026’ ನಿರ್ಮಾಣ ಮತ್ತು ವಸತಿಗೆ ಸಂಬಂಧಿಸಿದ ಪ್ರದರ್ಶನ ಮೇಳ ಹಾಗೂ ಬೆಳಗಾವಿ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚಾಗೋಷ್ಠಿ ಫೆ.5ರಿಂದ 8ವರೆಗೆ ನಡೆಯಲಿದೆ.

ಕ್ಲಬ್ ರಸ್ತೆಯ ಸಿಪಿಇಡಿ ಮೈದಾನದಲ್ಲಿ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಪ್ರದರ್ಶನ ಆಯೋಜನೆ ಸಮಿತಿ ಅಧ್ಯಕ್ಷ ಪ್ರಶಾಂತ ವಾಂಡ್ಕ‌ರ್ ತಿಳಿಸಿದರು.

Home add -Advt

ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ರೆಡೈ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ 8ನೇ ಆವೃತ್ತಿಯ ಬೆಲ್ಕಾನ್ ಮೇಳವು ಬೆಳಗ್ಗೆ 10ರಿಂದ ರಾತ್ರಿ 9ವರೆಗೆ ತೆರೆದಿರುತ್ತದೆ ಎಂದರು.

ಫೆ.8ರಂದು ನಡೆಯುವ ‘ವಿಕಾಸ ಮಂತ್ರ’ ಶೀರ್ಷಿಕೆಯ ಗೋಷ್ಠಿಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಳ‌ರ್, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪಾಲ್ಗೊಳ್ಳುವರು.

ಮೇಳದ 180 ಮಳಿಗೆಗಳಲ್ಲಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳು ಪ್ರದರ್ಶನಗೊಳ್ಳುತ್ತವೆ. ನಿರ್ಮಾಣ ಸಾಮಗ್ರಿ, ಗೃಹ ಹಣಕಾಸು, ಬ್ಯಾಂಕಿಂಗ್ ಸೇವೆಗಳನ್ನು ನೀಡುವ ಪ್ರಸಿದ್ಧ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳು, ಪ್ರಮುಖ ಬಿಲ್ಡರ್‌ಗಳು, ವಾಸ್ತುಶಿಲ್ಪಿಗಳು, ಇಂಜಿನಿಯರ್‌ಗಳು, ತಜ್ಞರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ವಿವಿಧ ಮನೆ, ಫ್ಲ್ಯಾಟ್, ವ್ಯವಹಾರಗಳಿಗೆ, ವಾಣಿಜ್ಯ ಸಂಕೀರ್ಣ, ಹೊಸ ನಿರ್ಮಾಣ ಸಾಮಗ್ರಿ, ಒಳಾಂಗಣ ವಿನ್ಯಾಸ ಮಾದರಿಗಳನ್ನು ಒಂದೇ ಸೂರಿನಡಿ ವೀಕ್ಷಿಸಬಹುದು. ಫುಡ್ ಕೋರ್ಟ್ ಹಾಗೂ ನಿತ್ಯವೂ ವಿವಿಧ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಇರಲಿವೆ ಎಂದರು.

Related Articles

Back to top button