ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಕ್ಷ್ಮೀಟೇಕ್ ನಿಂದ ಅಂಬೇಡ್ಕರ್ ಗಾರ್ಡನ್‌ಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರಿನ ಕೊಳವೆಯು ಸೋರಿಕೆಯಾಗಿದ್ದು ಚನ್ನಮ್ಮಾ ವೃತ್ತದ ಹತ್ತಿರ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ.
ಇದರಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿದೆ.
ಲಕ್ಷ್ಮೀಟೇಕ್ ನಿಂದ ಅಂಬೇಡ್ಕರ್ ಗಾರ್ಡನ್ ಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರಿನ ಕೊಳವೆಯು ಚನ್ನಮ್ಮಾ ವೃತ್ತದ ಹತ್ತಿರ ಸೊರಿಕೆಯಾಗಿದ್ದು ದಿನಾಂಕ: ೧೮.೧೦.೨೦೨೩ ರಿಂದ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ.
ಸ್ಮಾರ್ಟ್ ಸಿಟಿ ರೊಡ್ ಮಾಡುವಾಗ ಈ ಮಾರ್ಗದ ವಾಲ್ವ್ ಮತ್ತು ಪೈಪ್ ಕಾಂಕ್ರಿಟ್ ರೋಡ್ ಕೆಳಗಡೆ ಮುಚ್ಚಿರುವುದರಿಂದ ಇದನ್ನು ಹುಡುಕುವ ಕಾರ್ಯವು ಪ್ರಗತಿಯಲ್ಲಿದ್ದು ದುರಸ್ಥಿ ಕಾರ್ಯವು ತಡವಾಗುವ ಕಾರಣ, ಪ್ರಸ್ತುತ ಇರುವ ನೀರು ಸರಬರಾಜು ಷೆಡ್ಯೂಲ್ ಮುಂದಿನ ಮೂರು ದಿನಗಳಿಗೆ ಮುಂದುವರಿಯುತ್ತದೆ.
ಅಂದರೆ ದಿನಾಂಕ: ೧೯/೧೦/೨೦೨೩ ರಿಂದ ೨೧/೧೦/೨೦೨೩ ರವರೆಗೆ ಮೂರು ದಿವಸ ಬೆಳಗಾವಿ ನಗರದ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡುವ (ಸರದಿಯಲ್ಲಿ) ಷೆಡ್ಯೂಲ್‌ನಲ್ಲಿ ವ್ಯತ್ಯಯ ಉಂಟಾಗುವುದು.
ಸರಬರಾಜು ವ್ಯತ್ಯಯ ಉಂಟಾಗುವ ಉತ್ತರದ ಪ್ರದೇಶಗಳು: ಶಿವಾಜಿ ನಗರ, ಸುಭಾಶ ನಗರ, ವೀರಭದ್ರ ನಗರ, ಆಯೋದ್ಯ ನಗರ, ಅಸದ್ ಖಾನ್ ಸೊಸೈಟಿ, ಅಹ್ಮದ್ ನಗರ, ಅಶೋಕ ನಗರ (ಭಾಗಶ:), ಜೈಲ ಕಾಲೋನಿ, ಪಂಜಿ ಬಾಬಾ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ