Kannada NewsKarnataka NewsLatest
2ನೇ ಸ್ಥಾನಕ್ಕೇರಿದ ಬೆಳಗಾವಿ ವಿಮಾನ ನಿಲ್ದಾಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಹಿಂದಿಕ್ಕಿ ಬೆಳಗಾವಿ ವಿಮಾನ ನಿಲ್ದಾಣ ರಾಜ್ಯದ ಎರಡನೇ ಅತೀ ಹೆಚ್ಚು ಪ್ರಯಾಣಿಕರು ಸಂಚರಿಸಿದ ವಿಮಾನ ನಿಲ್ದಾಣ ಎನ್ನುವ ಖ್ಯಾತಿ ಗಳಿಸಿದೆ.
ಕಳೆದ ಜೂನ್ ತಿಂಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ ಒಟ್ಟು 391 ವಿಮಾನ ಹಾರಾಟ ನಡೆಸಿದ್ದು, 10,224 ಜನರು ಪ್ರಯಾಣಿಸಿದ್ದಾರೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಿ ಜೂನ್ ತಿಂಗಳ ಡೇಟಾ ರೆಲೀಸ್ ಮಾಡಿದ್ದು, ಅದರಲ್ಲಿ ಬೆಳಗಾವಿ 2 ನೇ ಸ್ಥಾನಕ್ಕೇರಿದೆ.
ಬೆಂಗಳೂರಿನ ನಂತರದ ಸ್ಥಾನ ಬೆಳಗಾವಿಗೆ ಬಂದಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ ಯನ್ನು ಹಿಂದಿಕ್ಕಿ, ಈಗ 2 ನೇ ಸ್ಥಾನ ಪಡೆದುಕೊಂಡಿದೆ.
ಮಂಗಳೂರು 3ನೇ ಸ್ಥಾನವನ್ನು, ಕಲಬುರಗಿ 4ನೇ ಸ್ಥಾನವನ್ನು ಹಾಗೂ ಮೈಸೂರು 5ನೇ ಸ್ಥಾನವನ್ನು ಪಡೆದಿದೆ. ಹುಬ್ಬಳ್ಳಿಯಿಂದ 14 ವಿಮಾನ ಸಂಚರಿಸಿದ್ದು ಕೇವಲ 55 ಜನರು ಪ್ರಯಾಣಿಸಿದ್ದಾರೆ.
ಮೈಸೂರಿನಿಂದ 330 ವಿಮಾನ ಹಾರಾಟ ನಡೆಸಿದ್ದು, 3158 ಪ್ರಯಾಣಿಕರು ಸಂಚರಿಸಿದ್ದಾರೆ.




