Kannada NewsKarnataka News

ಬೆಳಗಾವಿ ಜಿಲ್ಲೆ: ಬಸ್- ಬೈಕ್ ಅಪಘಾತ; ಮೂವರು ಯುವಕರ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ಕುಡಚಿ: ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಬಸ್ ಮಧ್ಯೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಾರುಗೇರಿ – ಕುಡಚಿ ರಸ್ತೆ ಮೇಲೆ ಈ ಅವಘಡ ಸಂಭವಿಸಿದ್ದು, ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅಪಘಾತದ ರಭಸಕ್ಕೆ ಮೂವರೂ ಸ್ಥಳದಲ್ಲೇ ಮೃತರಾದರು. ಭಗವಂತ ತಂ ಶಿವರಾಯ ಕಾಂಬಳೆ (45 ಸಾ ॥ ಹಾಳಸಿರಬೂರ), ವಿಶ್ವನಾಥ್ ಶ್ರೀಮತಿ ಕಾಂಬಳೆ (24 ಸಾ॥ ಹಾಳಸಿರಬೂರ) ಮತ್ತು ಕುಮಾರ ಬಾಳಪ್ಪ ಕಾಂಬಳೆ (35 ಸಾ॥ ಹಾಳಸಿರಬೂರ) ಮೃತರಾದವರು.

 

Home add -Advt

Related Articles

Back to top button