ACB ಅಧಿಕಾರಿಗಳೆಂದು ಬೆದರಿಸಿ ಹಣ ವಸೂಲಿಗಿಳಿದಿದ್ದ ಮೂವರು ಬೆಳಗಾವಿ CEN ಪೊಲೀಸರ ಬಲೆಗೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭ್ರಷ್ಠಾಚಾರ ನಿಗ್ರಹದಳ(ACB)ದ ಅಧಿಕಾರಿಗಳೆಂದು ಫೋನ್ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ ಮೂವರನ್ನು ಬೆಳಗಾವಿ ಸೈಬರ್ ಕ್ರೈಂ (CEN) ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಹಿರಿಯ ಸಾರಿಗೆ ಅಧಿಕಾರಿ ಈರಣ್ಣ ರಾಮಣ್ಣವರ್ ನೀಡಿದ ದೂರಿನಂತೆ ಕಾರ್ಯಾಚರಣೆ ನಡೆಸಿದ ಸಿಇಎನ್ ಪೊಲೀಸ್ ಇನಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ಹಾಸನ ಜಿಲ್ಲೆ ಸಕಲೇಶಪುರದ ರಜನಿಕಾಂತ, ಚಿಕ್ಕೋಡಿ ತಾಲೂಕಿನ ಸದಲಗಾದ ಮುರಗೆಪ್ಪ ಪೂಜಾರ್ ಹಾಗೂ ಕೊಲ್ಲಾಪುರದ ರಾಜೇಶ ಚೌಗಲೆ ಎನ್ನುವವರನ್ನು ಬಂಧಿಸಿದೆ.
ತಾವು ಎಸಿಬಿ ಅಧಿಕಾರಿಗಳಾಗಿದ್ದು, ನಿಮ್ಮ ವಿರುದ್ಧ ದೂರುಗಳು ಬಂದಿವೆ. ಕಚೇರಿ ಮತ್ತು ಮನೆ.ಯ ಮೇಲೆ ದಾಳಿ ಮಾಡಲಾಗುವುದು. ನಮ್ಮ ಖಾತೆಗೆ ಹಣ ಹಾಕಿದರೆ ಫೈಲ್ ಕ್ಲೋಸ್ ಮಾಡುತ್ತೇವೆ ಎಂದು ಹೇಳಿ ಅನೇಕರಿಗೆ ಇವರು ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈವರೆಗೆ ಎಷ್ಟು ಜನರಿಂದ ಹಣ ಪಡೆದಿದ್ದಾರೆ ಎನ್ನುವ ಕುರಿತು ವಿಚಾರಣೆ ಮುಂದುವರಿದಿದೆ. ಮಂಗಳವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಗಡ್ಡೇಕರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಬೆಳಗಾವಿ ಬಳಿ ತಲ್ವಾರ್ ತೋರಿಸಿ ವ್ಯಕ್ತಿಯಿಂದ ಚಿನ್ನಾಭರಣ ಸುಲಿಗೆ; ಬೆಚ್ಚಿ ಬೀಳಿಸಿದ ಘಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ