ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಚುನಾಯಿತ ಪ್ರತಿನಿಧಿಗಳಿದ್ದರೂ ಬೆಳಗಾವಿ ಮಹಾನಗರ ಪಾಲಿಕೆಯ 2022 -23ನೇ ಸಾಲಿನ ಬಜೆಟ್ ನ್ನು ಅಧಿಕಾರಿಗಳು ಮಂಡಿಸಿದ್ದಾರೆ.
ಮೇಯರ್, ಉಪಮೇಯರ್ ಆಯ್ಕೆ ಮತ್ತು ನೂತನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸದ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯರು ಇನ್ನೂ ಅಧಿಕೃತವಾಗಿ ಅಧಿಕಾರ ಪಡೆದಿಲ್ಲ. ಹಾಗಾಗಿ ಪಾಲಿಕೆ ಆಡಳಿತಾಧಿಕಾರಿಗಳೇ ಬಜೆಟ್ ಮಂಡಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 7 ತಿಂಗಳಾಗಿದೆ. ಆದರೆ ಇನ್ನೂ ಮೇಯರ್, ಉಪಮೇಯರ್ ಆಯ್ಕೆಯೇ ನಡೆದಿಲ್ಲ. ಹಾಗಾಗಿ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರವೇ ಸಿಕ್ಕಿಲ್ಲ.
ಚುನಾಯಿತ ಪ್ರತಿನಿಧಿಗಳು ಅಧಿಕಾರ ಸ್ವೀಕರಿಸಿದ ನಂತರ ಇದೇ ಬಜೆಟ್ ನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಇದನ್ನು ರದ್ದುಪಡಿಸಿ ಹೊಸ ಬಜೆಟ್ ಮಂಡಿಸುತ್ತಾರೋ ಕಾದು ನೋಡಬೇಕಿದೆ.
ಬಜೆಟ್ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –
2022-23 ನೇ ಸಾಲಿನ ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಮಂಡನೆ: ಇಲ್ಲಿದೆ ಸಮಗ್ರ ವಿವರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ