Belagavi NewsBelgaum NewsKannada NewsKarnataka NewsLatestSports

*ಹಾಕಿ ಬೆಳಗಾವಿ ಆಹ್ವಾನಿತ ಕಪ್ ಟೂರ್ನಮೆಂಟ್ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಹಾಕಿ ಯಾವಾಗಲೂ ಭಾರತೀಯರ ಹೆಮ್ಮೆ. ಇದೊಂದು ಹಬ್ಬ, ಪ್ರತಿಯೊಬ್ಬ ಭಾರತೀಯನ ಅಭಿಮಾನ ಎಂದು ಬಸವೇಶ್ವರ ಬ್ಯಾಂಕಿನ ಮಾಜಿ ಅಧ್ಯಕ್ಷೆ ಶೈಲಜಾ ಜಯಪ್ರಕಾಶ್ ಭಿಂಗೆ ಅಭಿಪ್ರಾಯಪಟ್ಟರು.

ಹಾಕಿ ಇಂಡಿಯಾದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿ ಲೇಲೆ ಮೈದಾನದಲ್ಲಿ ಆಯೋಜಿಸಲಾದ 4ನೇ ಹಾಕಿ ಬೆಳಗಾವಿ ಆಹ್ವಾನಿತ ಕಪ್ ಟೂರ್ನಮೆಂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯನ್ನು ಅಮೋದ್ರಾಜ್ ಸ್ಪೋರ್ಟ್ಸ್ ಪ್ರಾಯೋಜಿಸುತ್ತಿದೆ. ಅಧ್ಯಕ್ಷ ಗೂಳಪ್ಪ ಹೊಸಮನಿ, ಉಪಾಧ್ಯಕ್ಷ ಪ್ರಕಾಶ ಕಾಲ್ಕುಂದ್ರಿಕರ, ಕಾರ್ಯದರ್ಶಿ ಸುಧಾಕರ ಚಳ್ಕೆ, ಕ್ರೆಡೈ ಬೆಳಗಾವಿ ಅಧ್ಯಕ್ಷ ಯುವರಾಜ್ ಹುಲಜಿ, ಅಮೋದ್ರಾಜ್ ಕ್ರೀಡಾ ಸಂಸ್ಥೆಯ ಮುಕುಂದ ಪುರೋಹಿತ್, ವಾಣಿಜ್ಯೋದ್ಯಮ ಮಂಡಳಿ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ದತ್ತಾತ್ರೇ ಜಾಧವ, ತರಬೇತುದಾರರಾದ ಉತ್ತಮ್ ಶಿಂಧೆ, ಮನೋಹರ ಖಾನಾಪುರ, ಕೋಚ್‌ ಉತ್ತಮ್‌ಶಾವಾನ ಪಾಟೀಲ, ಡಾ.ಗಿರಿಜಾಶಂಕರ ಮಾನೆ, ಸಿದ್ಧಾರೂಢ ಚಳ್ಕೆ, ವಿಕಾಸ ಕಲಘಟಗಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಮೋದ್ರಾಜ್ ಭಿಂಗೆ ಅವರ 48ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಬೆಳಗಾವಿ ನಗರದ ಏಳು ಕಾಲೇಜು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಗೋಗಟೆ ವಾಣಿಜ್ಯ ಕಾಲೇಜು, ಆರ್‌ಪಿಡಿ ಕಾಲೇಜು, ಜಿಎಸ್‌ಎಸ್‌ ಕಾಲೇಜು, ಪೀಪಲ್‌ ಟ್ರೀ ಕಾಲೇಜು, ಸಂಗೊಳ್ಳಿ ರಾಯಣ್ಣ ಕಾಲೇಜು ಹಾಗೂ ಜಿಎಸ್‌ಎಸ್‌, ಆರ್‌ಪಿಡಿ ಕಾಲೇಜುಗಳ ಬಾಲಕಿಯರು ಭಾಗವಹಿಸಿದ್ದಾರೆ.

Home add -Advt

Related Articles

Back to top button