ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿನಾಂಕ: 06/02/2024 ರಂದು ರುಕ್ಸಾನಾ ಜಾಲ ನಾಂಜಿ ಸಾ॥ ಕ್ಯಾಂಪ್ ಬೆಳಗಾವಿ ಇವರು ಕಳೆದ 1 ತಿಂಗಳಿನಿಂದ ತನ್ನ ತಾಯಿಯ ಆರೈಕೆಗಾಗಿ ಶ್ರೀದೇವಿ ಪ್ರಕಾಶ ಮಾಳಗಿ ಉದ್ಯೋಗ: ಹೋಮ್ ನರ್ಸಿಂಗ್ ಸಾ: ಸುಲದಾಳ ಹಾಲಿ: ಕಾಕತಿ ತಾ.ಜಿ. ಬೆಳಗಾವಿ ಇವಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು ಇವಳು ಸುಮಾರು 12.31,000/- ರೂ ಕಿಮ್ಮತ್ತಿನ ಬಂಗಾರದ ಹಾಗೂ ವಜ್ರದ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಸಂಶಯ ಇದೆ ಎಂದು ನೀಡಿದ ದೂರಿನನ್ವಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.
ಈ ಪ್ರಕರಣದ ಕುರಿತು ಅಲ್ತಾಪ್ ಎಮ್. ಪೊಲೀಸ್ ಇನ್ಸಪೆಕ್ಟರ್ ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿಯ ಆರೋಪಿತಳಾದ ಶ್ರೀದೇವಿ ಪ್ರಕಾಶ ಮಾಳಗಿ (29) ಸಾ: ಸುಲದಾಳ ಹಾಲಿ: ಕಾಕತಿ ತಾ.ಜಿ. ಬೆಳಗಾವಿ ಇವಳನ್ನು ದಿನಾಂಕ: 06/02/2024 ರಂದು ವಶಕ್ಕೆ ಪಡೆದುಕೊಂಡು ಸೂಕ್ಷ್ಮ ರೀತಿಯಲ್ಲಿ ವಿಚಾರಣೆ ಮಾಡಿದಾಗ ಅವಳು ಪಿರ್ಯಾದಿಯವರ ಮನೆಯಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಂತೆ ಅವಳ ಕಡೆಯಿಂದ 175 ಗ್ರಾಂ ಬಂಗಾರದ ಆಭರಣಗಳು, ಹಾಗೂ 50 ಗ್ರಾಂ ಬೆಳ್ಳಿಯ ಆಭರಣ ಹೀಗೆ ಒಟ್ಟು 12,31,000/-ರೂಪಾಯಿ ಮೌಲ್ಯದ ಕಳ್ಳತನ ಮಾಡಿಕೊಂಡು ಹೋದ ಸ್ವತ್ತನ್ನುವಶಪಡಿಸಿಕೊಂಡು, ಅವಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.
ಆರೋಪಿತಳನ್ನು ವಶಕ್ಕೆ ಪಡೆದು ಆಭರಣಗಳನ್ನು ಜಪ್ತಪಡಿಸಿಕೊಂಡ ಅಲ್ತಾಪ ಮುಲ್ಲಾ, ಪಿಐ ಕ್ಯಾಂಪ್ ಹಾಗೂ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತ ಎಸ್. ಎನ್. ಸಿದ್ದರಾಮಪ್ಪ ಶ್ಲಾಘಿಸಿ, ತಂಡಕ್ಕೆ ರೂ.10,000/- ಬಹುಮಾನವನ್ನು ಘೋಷಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ