Kannada NewsKarnataka News

ಭಾನುವಾರ ಪೂರ್ಣ ಬೆಳಗಾವಿಗೆ ಬೆಳಕಿಲ್ಲ

ಭಾನುವಾರ ಪೂರ್ಣ ಬೆಳಗಾವಿಗೆ ಬೆಳಕಿಲ್ಲ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬರುವ ಭಾನುವಾರ ಬೆಳಗಾವಿ ವಿದ್ಯುತ್ ಇರುವುದಿಲ್ಲ. ಆಗಸ್ಟ್ 25ರಂದು ನಿರ್ವಹಣೆ ಹಿನ್ನೆಲೆಯಲ್ಲಿ ವಿದ್ಯುತ್ ನಿಲುಗಡೆ ಮಾಡಲು ಹೆಸ್ಕಾಂ ನಿರ್ಧರಿಸಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪೂರ್ಣ ಬೆಳಗಾವಿಗೆ ವಿದ್ಯುತ್ ಕಡಿತ ಮಾಡಲಾಗುವುದು ಎಂದು ವಿದ್ಯುತ್ ಪ್ರಸರಣ ನಿಗಮ ತಿಳಿಸಿದೆ.

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಬೆಳಗಾವಿಯಲ್ಲಿ ಲೈನ್ ಗಳ ದುರಸ್ತಿ ಮತ್ತತರ ನಿರ್ವಹಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷವೂ ಇದೇ ಹಿನ್ನೆಲೆಯಲ್ಲಿ ಭಾನುವಾರ ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ.

ಇದನ್ನೂ ಓದಿ – ಹೆಸ್ಕಾಂ ಸಿಬ್ಬಂದಿ ಅವಿಶ್ರಾಂತ ದುಡಿಮೆ

ಹೆಸ್ಕಾಂ ವರ್ಷವಿಡೀ ನಿರ್ವಹಣೆ ಹಿನ್ನೆಲೆಯಲ್ಲಿ ಒಂದೊಂದು ಫೀಡರ್ ಕೆಲಸ ಮಾಡುತ್ತ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡುತ್ತದೆ. ಜೊತೆಗೆ ವಾರ್ಷಿಕ ನಿರ್ವಹಣೆ ಕೆಲಸವೂ ನಡೆಯುತ್ತದೆ. 4-5 ವರ್ಷದ ಹಿಂದೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಲೈನ್ ಗಳ ನಿರ್ವಣೆ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ, ಇನ್ನು ಮುಂದೆ ವಾರ್ಷಿಕ ನಿರ್ವಹಣೆ ಇರುವುದಿಲ್ಲ ಎಂದು ಹಾಸ್ಕಾಂ ಹೇಳಿತ್ತು. ಆದರೆ ವಾರ್ಷಿಕ ನಿರ್ವಹಣೆ ಈಗಲೂ ಮುಂದುವರಿದೆ.

ಇದನ್ನೂ ಓದಿ – ಮಳೆ ಅವಾಂತರ; ಸಹಕರಿಸಲು ಹೆಸ್ಕಾಂ ಮನವಿ ; ಹೆಚ್ಚುವರಿ ಸಿಬ್ಬಂದಿ ಬೇಡಿಕೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button