*ಬೆಳಗಾವಿ ನಿಜ ಅರ್ಥದಲ್ಲಿ ಸ್ಮಾಟ್ ಸಿಟಿ ನನ್ನ ಗುರಿ; ಮೃಣಾಲ ಹೆಬ್ಬಾಳ್ಕರ್*; *ಬೆಳಗಾವಿ ಸಮಗ್ರ ಅಭಿವೃದ್ಧಿಗಾಗಿ ಸ್ಪರ್ಧೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರವನ್ನು ನಿಜ ಅರ್ಥದಲ್ಲಿ ಸ್ಮಾಟ್ ಸಿಟಿಯನ್ನಾಗಿ ಮಾಡುವ ಗುರಿಯೊಂದಿಗೆ ಚುನಾವಣೆಯಲ್ಲಿ ತಾವು ಸ್ಪರ್ಧಿಸಿರುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ನಗರದ ವಿವಿಧೆಡೆ ಶುಕ್ರವಾರ ಸಂಜೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕ್ಷೇತ್ರದಲ್ಲಿ ಜನತೆ ಬಿಜೆಪಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಅಧಿಕಾರ ಕೊಟ್ಟಿದ್ದಾರೆ; ಆದರೆ, ಇನ್ನೂ ಅಭಿವೃದ್ಧಿಯಾಗಿಲ್ಲ. ಬಿಜೆಪಿಯವರು ಅಭಿವೃದ್ಧಿ ಮುಂದಿಟ್ಟುಕೊಂಡು ಜನರ ಮನೆ ಬಾಗಿಲಿಗೆ ಬರುತ್ತಿಲ್ಲ; ನನ್ನ ನೋಡಿ ಓಟು ಕೊಡಬೇಡಿ; ಪ್ರಧಾನಿ ಮೋದಿಯವರನ್ನು ನೋಡಿ ಓಟು ಕೊಡಿ ಎಂದು ಕೇಳುತ್ತಿದ್ದಾರೆ; ಇದು ಕ್ಷೇತ್ರದ ಜನರಿಗೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದರು.
*ಮಜಬೂರ್ ಎಂಪಿ ತಿರಸ್ಕರಿಸಿ; ಮಜಬೂತ್ ಎಂಪಿ ಬೇಕು*
ನಮ್ಮ ತಾಯಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಬಿಜೆಪಿಯವರೊಂದು ಸ್ಲೋಗನ್ ಹೇಳುತ್ತಿದ್ದರು. ಆದೇನೆಂದರೆ, ಮೋದಿ ಜರೂರ್ ಹೈ ಎಂಪಿ ಮಜುಬೂರ್ ಹೈ ಎಂದು. ಆದರೆ, ನಾವಿಂದು ಹೇಳುವುದೇನೆಂದರೆ, ನಮಗೆ ಮಜಬೂರ್ ಎಂಪಿ ಬೇಡ; ಮಜಬೂತ್ ಎಂಪಿ ಬೇಕು; ಮಜಬೂತ್ ಎಂಪಿ ಇದ್ದರೇನೇ, ಅಭಿವೃದ್ಧಿ ಆಗೋದು; ನಮ್ಮೆಲ್ಲ ಯುವಕರಿಗೆ ನೌಕರಿ ಸಿಗೋದು ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದರು.
ನಮ್ಮ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯೆಂದು ಕರೆಸಿಕೊಳ್ಳುವುದಕ್ಕೆ ನಮಗೆಲ್ಲ ಹೆಮ್ಮೆ ಆಗುತ್ತದೆ. ಇಂದು ದೊಡ್ಡ ದೊಡ್ಡ ಫ್ಯಾಕ್ಟರಿಗಳೆಲ್ಲ ಹುಬ್ಬಳ್ಳಿ -ಧಾರವಾಡಕ್ಕೆಗೆ ಹೋಗಿವೆ; ಹೈಕೋರ್ಟ್, ಐಐಟಿ ಕಾಲೇಜು; ನಮ್ಮ ಯುವಕರಿಗೆ ನೌಕರಿ ಮಾಡುವ ಸವಲತ್ತುಗಳೆಲ್ಲ ಹುಬ್ಬಳ್ಳಿಗೆ ಹೋಗಿವೆ; ಇವೆನ್ನೆಲ್ಲ ಯಾರು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದನ್ನು ನೀವೇ ಯೋಚನೆ ಮಾಡಿ ಎಂದ ಮೃಣಾಲ ಹೆಬ್ಬಾಳ್ಕರ್, ದುರಾದೃಷ್ಟಕರ ಸಂಗತಿ ಏನೆಂದರೆ ನಮ್ಮ ವಿರುದ್ಧ ಸ್ಪರ್ಧಿ ಮಾಡಿರುವ ಪಕ್ಷದ ಅಭ್ಯರ್ಥಿ ಕೂಡ ಹುಬ್ಬಳ್ಳಿಯವರು; ಏನಾದರೂ ನಿಮ್ಮ ಕೆಲಸ ಕಾರ್ಯಗಳು , ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದರೆ ಹುಬ್ಬಳ್ಳಿಗೆ ಹೋಗಬೇಕಾಗುತ್ತೆ; ಹಾಗಾಗಿ ಈ ಬಗ್ಗೆ ನೀವೇ ಯೋಚನೆ ಮಾಡಿ ಮತ ಚಲಾಯಿಸಿ ಎಂದರು.
ಬೆಳಗಾವಿ ಬಗ್ಗೆ ಗೊತ್ತಿರುವ ವ್ಯಕ್ತಿ ನಾನು
ಬುದ್ಧಿವಂತರಾದ ಕ್ಷೇತ್ರದ ಜನತೆ ಅರ್ಥಮಾಡಿಕೊಳ್ಳುವ ಕಾಲ ಬಂದಿದೆ. ನಿಮಗೆ ಸ್ಥಳೀಯರು ಬೇಕೋ..? ಅಥವಾ ದೂರದಲ್ಲಿರುವ ವ್ಯಕ್ತಿ ಬೇಕೋ ಎಂದು ಜನತೆಯನ್ನು ಪ್ರಶ್ನಿಸಿದ ಅವರು, ಇದು ನಮ್ಮ ಬೆಳಗಾವಿ ಜಿಲ್ಲೆಯ ಜನತೆಯ ಸ್ವಾಭಿಮಾನ, ಆಸ್ಮೀತೆಯ ಪ್ರಶ್ನೆ. ಹಾಗಾಗಿ, ಈ ಬಾರಿ ನಿಮ್ಮ ಮನೆ ಮಗನಾದ ನನಗೊಮ್ಮೆ ಅವಕಾಶ ಮಾಡಿಕೊಡಿ; ಬೆಳಗಾವಿಗೆ ಏನ್ನೆಲ್ಲ ಬೇಕು ಎನ್ನುವುದು ಚೆನ್ನಾಗಿ ಗೊತ್ತು; ನಾನು ಇಲ್ಲೇ ಹುಟ್ಟಿ ಬೆಳೆದವನು; ಜನರ ಕಷ್ಟಸುಖಗಳೇನು ಎನ್ನುವುದೂ ಗೊತ್ತು; ಈ ಭಾಗದ ಜನರಾಡುವ ಭಾಷೆಗಳೆಲ್ಲ ಗೊತ್ತು; ನಾನು ಇಂಜಿನಿಯರ್ ಇದ್ದೇನೆ; ನಮ್ಮ ತಾಯಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಬಹಳ ಗಮನಕೊಟ್ಟು ನೋಡಿ; ಕಲಿತುಕೊಂಡಿದ್ದೇನೆ. ಬರುವಂತಹ ದಿನಮಾನಗಳಲ್ಲಿ ಬೆಳಗಾವಿಯನ್ನು ಸ್ಮಾಟ್ ಸಿಟಿಯನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದ್ದೇನೆ; ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ ಜೊತೆ ಸೇರಿ ಅಭಿವೃದ್ದಿ ಮಾಡುತ್ತೇನೆ. ತಾವೆಲ್ಲರೂ ಆಶೀರ್ವಾದಿಸಿ ಎಂದು ಮೃಣಾಲ ಹೆಬ್ಬಾಳ್ಕರ್ ಮನವಿ ಮಾಡಿದರು.
ನೆಹರು ನಗರದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಸಂಘದ ಸಭೆ, ಸದಾಶಿವ ನಗರ, ಅಂಬೇಡ್ಕರ್ ನಗರ, ಶಿವಬಸವ ನಗರ, ರಾಮತೀರ್ಥ ನಗರ, ಕಣಬರ್ಗಿ ಮೊದಲಾದ ಪ್ರದೇಶದಲ್ಲಿ ಪ್ರಚಾರ ಸಭೆ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ರಾಜುಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ಎಸ್.ಸಿ.ಮಾಳಗಿ, ಮಾಜಿ ಸಚಿವರಾದ ಶಶಿಕಾಂತ್ ನಾಯಕ್, ಆರ್.ಪಿ.ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ರೋಹಿಣಿ ಪಾಟೀಲ, ಎಸ್.ಎಸ್.ಕಿವಡಸಣ್ಣವರ್, ಆಸೀಫ್ ಮುಲ್ಲಾ, ಬೈರೆಗೌಡ, ಅಜಿತ್ ಚೌಹಾನ್, ಸತೀಶ್ ಜಾಧವ್, ಶಿವಾಜಿ ಜಾಧವ್, ಸಂಭಾಜೀ ಜಾಧವ್, ಅಕ್ಷಯ ಚೌಹಾನ್, ಸರಳಾ ಹೆರೆಕಾರ್, ಯಲ್ಲಪ್ಪ ನಾಯಿಕ್, ರಾಕೇಶ್ ಗುನ್ನವಗೋಳ, ಗಣೇಶ್ ರನ್ನದ್, ಅಜಯ ಬಿರಂಜೆ, ಸಂಜಯ ಸಸಾನೇ, ಮೋಹನ್ ಸಸಾನೇ, ರವಿ ದೇಮಟ್ಟಿ, ಮಹೇಂದ್ರ ಕವಳಗಿ, ಜಾನ್ ಲೊಂಡೆ, ವಿಜಯ್ ಲೊಂಡೆ, ರಮನ್ ಚೌಗುಲೆ, ನೇಸರ್ ಲೊಂಡೆ, ವಿಜಯೇಂದ್ರ ಲೊಂಡೆ, ಸ್ವಯಂ ಲೊಂಡೆ, ಓಂಕಾರ್ ಲೊಂಡೆ, ಮುಗಟಸಾಬ್ ಹೊಂಗಲ, ತಾಹಿರ್ ಸೈಯದ್, ಎಂ.ಬಿ.ನಿರ್ವಾಣಿ, ಎಂ.ಎಂ.ಕಿತ್ತೂರ್, ಸಿ.ಬಿ.ಪಾಟೀಲ, ವಕೀಲರಾದ ಯರಗಣವಿ, ಲತಾ ಮಾನೆ, ಪುಷ್ಪ ಪರ್ವತರಾವ್, ರಾಜಾ ಸಲೀಂ, ದಿನೇಶ್ ನಾಶಿಪುಡಿ, ಜ್ಯೋತಿ ಬಾವಿಕಟ್ಟಿ, ಅನುಶ್ರೀ ದೇಶಪಾಂಡೆ, ಸರಳಾ ಹೆರೆಕರ್, ಜಯಶ್ರೀ ಮಾಳಗಿ, ಶಿವಾನಂದ ತಂಬಾಕೆ, ಸಂತೋಷ ಪರ್ವತರಾವ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ