Kannada NewsKarnataka News

ಬೆಳಗಾವಿ: ಕನ್ನಡ ಗೀತೆಗಳ ಸ್ಪರ್ಧೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ಮಹಿಳಾ ಸಂಘದ ಸಾಹಿತ್ಯ ಕಲಾ ವೇದಿಕೆ ವತಿಯಿಂದ ಫೆಬ್ರವರಿ 5ರಂದು ಕನ್ನಡ ಗೀತೆಗಳ ಸ್ಪರ್ಧೆಯ ಸ್ವರ ಪರೀಕ್ಷೆ (ಆಡಿಶನ್) ನಡೆಯಲಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಟಿಳಕವಾಡಿ ಬುಧವಾರ ಪೇಟೆಯ ಜಿ.ಜಿ.ಚಿಟ್ನೀಸ್ ಸ್ಕೂಲ್ ನಲ್ಲಿ ಆಡಿಶನ್ ನಡೆಯಲಿದ್ದು, ಆಸಕ್ತರು ಬಂದು ಹೆಸರು ನೋಂದಾಯಿಸಬಹುದು.

Home add -Advt

ಸ್ವರ ಪರೀಕ್ಷೆಗೆ ಐವರು ಪುರುಷರು ಇಲ್ಲವೇ ಐವರು ಮಹಿಳೆಯರ ಗುಂಪು ಇರಬೇಕು. ಯಾವುದೇ ಕನ್ನಡ ಹಾಡನ್ನು ಹಾಡಬಹುದು. ಅಂತಿಮ ಸ್ಪರ್ಧೆ ಫೆಬ್ರವರಿ 26ರಂದು ಮೂರು ಸುತ್ತಿನಲ್ಲಿ ನಡೆಯಲಿದೆ. ಸ್ವರ ಪರೀಕ್ಷೆಯಲ್ಲಿ ಆಯ್ಕೆಯಾದವರು ದಾಸರ ಪದ, ವಚನ ಹಾಗೂ ತತ್ವಪದ ಹೀಗೆ ಈ ಮೂರು ಪ್ರಕಾರದ ಹಾಡುಗಳನ್ನು ಅಂತಿಮ ಸ್ಪರ್ಧೆಗೆ ಸಿದ್ಧಪಡಿಸಿಕೊಳ್ಳಬೇಕು.

ಪುರುಷರಿಗೂ, ಮಹಿಳೆಯರಿಗೂ ಪ್ರತ್ಯೇಕ ನಗದು ಬಹುಮಾನಗಳಿವೆ. ಮೊದಲ ಬಹುಮಾನ 5 ಸಾವಿರ ರೂ.  ಎರಡನೇ ಬಹುಮಾನ 3 ಸಾವಿರ ರೂ. ಹಾಗೂ 3ನೇ ಬಹುಮಾನ 2 ಸಾವಿರ ರೂ. ಇದ್ದು ತಲಾ 1 ಸಾವಿರ ರೂ.ಗಳ ಎರಡು ಸಮಾಧಾನಕರ ಬಹುಮಾನಗಳಿವೆ.

ಹೆಚ್ಚಿನ ವಿವರಗಳಿಗಾಗಿ ಮತ್ತು ಮಾರಾಟ ಮಳಿಗೆ ಹಾಕಬಯಸುವವರು, ಶುಭದಾ ಕೋಟೂಳಕರ (ಮೊಬೈಲ್ – 9902852367), ಸಂಗೀತಾ ಪಾಟೀಲ ( ಮೊಬೈಲ್ – 9980070771) ಅಥವಾ ಗೌರಿ ಸರ್ನೋಬತ್ ( ಮೊಬೈಲ್ – 9481390551) ಅವರನ್ನು ಸಂಪರ್ಕಿಸಬಹುದು.

ಬೆಳಗಾವಿಯ ನ್ಯಾಯಾಧೀಶರು, ನ್ಯಾಯವಾದಿಗೆ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ

https://pragati.taskdun.com/nyayangadalli-kannada-prize-distributed/

Related Articles

Back to top button