Kannada NewsKarnataka NewsLatest

ಬೆಳಗಾವಿ ಲೋಕಸಭೆ ಚುನಾವಣೆ: ದೆಹಲಿ ಸೇರಿದ ಬಿಜೆಪಿಯ ಮೂರು ಸಮೀಕ್ಷೆ ವರದಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಇನ್ನು 2 ತಿಂಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಚಟುವಟಿಕೆ ತೀವ್ರಗೊಂಡಿದೆ.

ಎರಡೂ ಅಭ್ಯರ್ಥಿಗಳು ಪ್ರಾಥಮಿಕ ಸರ್ವೆ ನಡೆಸಿದ್ದು, ಅಭ್ಯರ್ಥಿ ಆಯ್ಕೆಯ ಅಂತಿಮ ಹಂತದಲ್ಲಿವೆ. ಕಾಂಗ್ರೆಸ್ ನಲ್ಲಿ ಮೂರು ಆಕಾಂಕ್ಷಿಗಳು ಕಾಣಿಸಿಕೊಂಡಿದ್ದರೆ ಬಿಜೆಪಿಯಲ್ಲಿ ನೂರು ಆಕಾಂಕ್ಷಿಗಳಿದ್ದಾರೆ. ಆದರೆ ಎರಡೂ ಪಕ್ಷಗಳು ಆಕಾಂಕ್ಷಿಗಳನ್ನು ಹೊರತುಪಡಿಸಿಯೂ ಗೆಲ್ಲುವ ಅರ್ಹತೆ ಇರುವವರಿಗಾಗಿ ಹುಡುಕಾಟ ನಡೆಸಿವೆ.

ಕಾಂಗ್ರೆಸ್ ಈಗಾಗಲೆ 2 ಸಭೆ ನಡೆಸಿ ಚರ್ಚೆ ನಡೆಸಿದೆ. ಆಕಾಂಕ್ಷಿಗಳ ಮಾಹಿತಿ ಕಲೆ ಹಾಕಿದೆ. ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿದೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಚುನಾವಣೆಯ ಜವಾಬ್ದಾರಿ ಹೊರಿಸಿದೆ.

ಭಾರತೀಯ ಜನತಾ ಪಾರ್ಟಿಯಲ್ಲಿ ಮೂವರು ಮಾಜಿ ಸಂಸದರು ಸರಿದಂತೆ ಹಲವರು ಕಣಕ್ಕಿಳಿಯುವ ಆಸಕ್ತಿ ತೋರಿಸುತ್ತಿದ್ದಾರೆ. ನಿತ್ಯ ಆಕಾಂಕ್ಷಿಗಳಿಂದ ಬರುವ ಫೋನ್ ಕರೆಗೆ ಸಂಘಪರಿವಾರದ ಮುಖಂಡರು ಬೇಸತ್ತಿದ್ದಾರೆ. ಆಕಾಂಕ್ಷಿಗಳು ಸಂಘಪರಿವಾರದ ಮುಖಂಡರಲ್ಲದೆ, ಬೆಂಗಳೂರು, ದೆಹಲಿಯ ಬಿಜೆಪಿ ನಾಯಕರ ಮನೆಯ ಕದವನ್ನೂ ತಟ್ಟುತ್ತಿದ್ದಾರೆ.

ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೇಂದ್ರ ರೈಲ್ವೆ ಖಾತೆ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಕುಟುಂಬಸ್ಥರೂ ಕಣಕ್ಕಿಳಿಯಲು ಆಸಕ್ತರಾಗಿದ್ದು, ಸುರೇಶ ಅಂಗಡಿ ಅವರ ದ್ವಿತೀಯ ಪುತ್ರಿ, ಸಚಿವ ಜಗದೀಶ ಶೆಟ್ಟರ್ ಸೊಸೆ ಶೃದ್ಧಾ ತಯಾರಿ ನಡೆಸುತ್ತಿದ್ದಾರೆ.

ಈ ಮಧ್ಯೆ ಭಾರತೀಯ ಜನತಾ ಪಾರ್ಟಿಯ ಪಾರ್ಲಿಮೆಂಟರಿ ಕಮಿಟಿ ತನ್ನದೇ ಆದ ವಿವಿಧ ಮೂಲಗಳಿಂದ ವರದಿ ತರಿಸಿಕೊಂಡಿದೆ.  ಸಂಘಪರಿವಾರದಿಂದ ಒಂದು ವರದಿ ತರಿಸಿಕೊಂಡಿರುವ ಬಿಜೆಪಿ ಹೈಕಮಾಂಡ್, ತನ್ನದೇ ಒಂದು ತಂಡವನ್ನು ಕಳಿಸಿ ಅದರಿಂದಲೂ ವರದಿ ಪಡೆದುಕೊಂಡಿದೆ. ಜೊತೆಗೆ ಕ್ಷೇತ್ರದ ಶಾಸಕರಿಂದಲೂ ಅಭಿಪ್ರಾಯ ಸಂಗ್ರಹಿಸಿದೆ. ಈ ಮೂರೂ ವರದಿಯನ್ನು ತಾಳೆ ಹಾಕಿ ಅಭ್ಯರ್ಥಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ಜನೆವರಿ ಮಧ್ಯಭಾಗದಲ್ಲಿ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದ್ದು, ಚುನಾವಣೆ ಫೆಬ್ರವರಿಯಲ್ಲಿ ನಡೆಯಬಹುದು. ಹಾಗಾಗಿ ಎರಡೂ ಪಕ್ಷಗಳು ಅಭ್ಯರ್ಥಿ ಆಯ್ಕೆಗೆ ತೀವ್ರ ಕಸರತ್ತು ನಡೆಸಿವೆ.

ಹುಬ್ಬಳ್ಳಿ ಸೊಸೆಗೆ ಬೆಳಗಾವಿ ಮೇಲೆ ಕಣ್ಣು: ಏನಿದರ ಲೆಕ್ಕಾಚಾರ?

ಸುರೇಶ ಅಂಗಡಿ ಪುತ್ರಿ, ಹುಬ್ಬಳ್ಳಿ ಸೊಸೆ ಬೆಳಗಾವಿ ಪಾಲಿಟಿಕ್ಸ್ ಗೆ ಎಂಟ್ರಿ – ವೀಡಿಯೋ ಸಹಿತ ವರದಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button