Belagavi NewsBelgaum NewsKannada NewsKarnataka News

*ಆಸ್ತಿ ತೆರಿಗೆ ಪಾವತಿ ಮೇಲೆ 5% ರಿಯಾಯತಿ ಘೋಷಿಸಿದ ಬೆಳಗಾವಿ ಪಾಲಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ (2026-27ನೇ) ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ಆಸ್ತಿ ತೆರಿಗೆ ಮೇಲೆ ಶೇ. 5% ರ ರಿಯಾಯಿತಿಯ ಸೌಲಭ್ಯವಿರುತ್ತದೆ,

ತೆರಿಗೆದಾರರಿಗೆ ತಮ್ಮ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸುವ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ “Online Payment Integration of property tax” ಸಾಪ್ಟವೇರ್‌ನ್ನು ಪಾಲಿಕೆಯ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುತ್ತದೆ. ಆಸ್ತಿ ತೆರಿಗೆದಾರರು ಈಗಾಗಲೇ ತಮ್ಮ ಆಸ್ತಿ ತೆರಿಗೆಯ ಕುರಿತು PID Number ಇರುವ ಗಣಕೀಕೃತ ಫಾರ್ಮ-1 ಪಡೆದವರು ಬೆಳಗಾವಿ-1 ಕೇಂದ್ರಗಳಲ್ಲಿ ಹಾಗೂ Debit Card/Credit Card/Net Banking ಮೂಲಕವು ಆಸ್ತಿ ತೆರಿಗೆ ಪಾವತಿಸಬಹುದಾಗಿದೆ.

ಆನ್‌ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಪಾವತಿಸುವ ವಿಧಾನಗಳು. ಆಸ್ತಿ ತೆರಿಗೆದಾರರು ಪಾಲಿಕೆಯ ವೆಬ್‌ಸೈಟ್ www.belagavicitycorp.org  ಗೆ Visit ಮಾಡಬಹುದು. Click on online services. Go to “View property details and pay online” option. Enter PID and Click on search Button then “view” in the next window click on “view tax & pay” to get form-1 and then make payment online.

ಸಾರ್ವಜನಿಕರು ಎಪ್ರಿಲ್-2026 ರಲ್ಲಿಯೇ ಆಸ್ತಿ ತೆರಿಗೆ ಪಾವತಿಸಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button