Advertisement -Home Add

ಬೆಳಗಾವಿಲ್ಲಿದೆ ಹೈಟೆಕ್ ಕಳ್ಳರ ಗ್ಯಾಂಗ್; ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೇ ಕದ್ದು ಪರಾರಿಯಾದ ಖದೀಮರು

ರಿಮೋಟ್ ಕೀ ಹ್ಯಾಕ್ ಮಾಡಿ ಕೃತ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಹೈಟೆಕ್ ತಂತ್ರಜ್ಞಾನ ಬಳಸಿ ಕಾರು ಕಳ್ಳತನ ಮಾಡುವ ಗ್ಯಾಂಗ್ ಆಕ್ಟೀವ್ ಆಗಿದ್ದು, ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಸ ಕಾರುಗಳನ್ನು ರಿಮೋಟ್ ಕೀ ಬಳಸಿ ಕದ್ದೊಯ್ದ ಘಟನೆ ನಡೆದಿದೆ.

ಸದಾಶಿವನಗರ ಹಾಗೂ ರಾಮಮೂರ್ತಿ ನಗರದಲ್ಲಿ ಈ ಘಟನೆ ನಡೆದಿದ್ದು, ಕಾರುಗಳ ರಿಮೋಟ್ ಕೀ ಹ್ಯಾಕ್ ಮಾಡಿರುವ ಕಳ್ಳರು ಮನೆ ಮುಂದೆ ನಿಲ್ಲಿಸಿದ್ದ ಕಾರನ್ನೇ ಕದ್ದು ಪರಾರಿಯಾಗಿದ್ದಾರೆ.

ಸದಾಶಿವನಗರದಲ್ಲಿ ಡಾ.ಬೆಲ್ಲದ ಎಂಬುವವರ ಕಾರು ಕಳ್ಳತನವಾಗಿದ್ದರೆ, ರಾಮಮೂರ್ತಿ ನಗರದಲ್ಲಿ ಅನಿಲ್ ಪಾಟೀಲ್ ಕಾರು ಕಳುವಾಗಿದೆ. ಖದೀಮರು ಕಾರಿನೊಂದಿಗೆ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.