Advertisement -Home Add

ಚೆಂಬರ್ ಆಫ್ ಕಾಮರ್ಸ್ ಚುನಾವಣೆ; ಕೆಲವು ಅವಿರೋಧ ಆಯ್ಕೆ

Election for Belgaum Chamber of commerce and Industries

ಚೆಂಬರ್ ಆಫ್ ಕಾಮರ್ಸ್ ಚುನಾವಣೆ; ಕೆಲವು ಅವಿರೋಧ ಆಯ್ಕೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿ ವಾಣಿಜ್ಯೋದ್ಯಮ ಸಂಘದ 2019-20ನೇ ಸಾಲಿನ ಕಾರ್ಯಕಾರಿ ಸಮಿತಿ ಚುನಾವಣೆ  ಇದೇ 29ರಂದು ನಡೆಯಲಿದ್ದು, ಕೆಲವು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಆಜೀವ ಸದಸ್ಯ ವಿಭಾಗದಿಂದ ಕೈಗಾರಿಕಾ ಕ್ಷೇತ್ರಕ್ಕೆ ಮೂರು ಸ್ಥಾನಕ್ಕೆ 7 ಜನ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಪ್ರಭಾಕರ ನಾಗರಮುನೋಳಿ, ಉದಯ ಜೋಶಿ, ಮಹೇಂದ್ರ ನರಸಗೌಡ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಅಶೋಕ ಕೋಳಿ, ಸಚಿನ್ ಸಬನೀಸ್,  ಸಂಚಿತ್ ಕಿತ್ತೂರು, ಚನ್ನಬಸಪ್ಪ ಹೊಂಡದಕಟ್ಟಿ ಕಣದಲ್ಲಿ ಉಳಿದಿದ್ದಾರೆ.

ಆಜೀವ ಕ್ಷೇತ್ರದ ವಾಣಿಜ್ಯ ವಲಯದಿಂದ ಬಾಳಪ್ಪ ಕಗ್ಗಣಗಿ, ರೋಹಿತ್ ಕಪಾಡಿಯಾ, ವಿಜಯ ದುರ್ಗಶೆಟ್ಟಿ, ಈರಪ್ಪ ದಾಯಣ್ಣವರ್, ಶಿವಾನಂದ ಬಾಗಿ ಆಯ್ಕೆಯಾಗಿದ್ದಾರೆ. ವಿಕ್ರಮ ಜೈನ, ಜಯದೀಪ ಸಿದ್ಧಣ್ಣವರ್, ಸಂಜಯ ಪೋತದಾರ, ಪ್ರಶಾಂತ ಜೇಡಿ, ರಾಜೇಂದ್ರ ಮುತಗೇಕರ್ ನಾಮಪತ್ರ ಸಲ್ಲಿಸಿ ಹಿಂದಕ್ಕೆ ಪಡೆದರು.

ಕೈಗಾರಿಕಾ ವಲಯದಿಂದ ಸಾಮಾನ್ಯ ಕ್ಷೇತ್ರಕ್ಕೆ ಪರಶುರಾಮ ಕದಂ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಲಾಯಿತು.

ವಾಣಿಜ್ಯ ವಲಯದಿಂದ ಸಾಮಾನ್ಯ ಕ್ಷೇತ್ರದ  ಸುನೀಲ ಚೌಗಲೆ ಅವಿರೋಧವಾಗಿ ಆಯ್ಕೆಯಾದರು.