Corona – Balachandra Jarkiholi
Mahantesh Vakkunda -Babri

ಸಾಧಕರಿಗೆ ಸತ್ಕರಿಸಿದ ಡಾ.ಪ್ರಭಾಕರ ಕೋರೆ

ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಂತರ ವಿಶ್ವವಿದ್ಯಾಲಯಗಳ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿಜೇತರಿಗೆ ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಸತ್ಕರಿಸಿದರು.

ಇತ್ತೀಚಿಗೆ ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಓಡಿಸಾದ ಭುವನೇಶ್ವರದಲ್ಲಿ ಆಯೋಜಿಸಿದ್ದ ಮೊದಲನೆ ಖೇಲೋ ಇಂಡಿಯಾ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಲಿಂಗರಾಜ ಮಹಾವಿದ್ಯಾಲಯದ ವಿದ್ಯಾರ್ಥಿ ಅಮರನಾಥ ಡಿ. ೪೦೦ ಮೀಟರ್ ಅಡೆತಡೆಯ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

ಇದೇ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಲಕ್ಷ್ಮಣ ಗೋವೇಕರ ೫೫ ಕೆಜಿ ಕುಸ್ತಿಯಲ್ಲಿ ಹಾಗೂ ಪ್ರಹ್ಲಾದ ಹುಲಿಕೊಟ್ಲಿ ೬೬ಕೆ.ಜಿ. ಕುಸ್ತಿಯಲ್ಲಿ ಪಾಲ್ಗೊಂಡಿದ್ದರು. ಅಂತೆಯೇ ಆರ್.ಎಲ್. ವಿಜ್ಞಾನ ಮಹಾವಿದ್ಯಾಲಯದ ಜೂಡೋದಲ್ಲಿ ಸಮರ್ಥ ಕಡಗಾಂವಕರ್ ಪಾಲ್ಗೊಂಡಿದ್ದರು.

ಅದ್ವಿತೀಯ ಸಾಧನೆ ಮಾಡಿದ ಈ ಕ್ರೀಡಾಪಟುಗಳಿಗೆ ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ, ಆರ್.ಎಲ್.ವಿಜ್ಞಾನ ಕಾಲೇಜಿನ ಡಾ.ವಿ.ಡಿ.ಯಳಮಲಿ, ಪ್ರೊ.ಶೀತಲ್ ನಂಜಪ್ಪನವರ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಹಾಗೂ ರೀಚಾ ರಾಮರಾವ್ ಅವರು ಉಪಸ್ಥಿತರಿದ್ದರು.