2 ದಿನದಲ್ಲಿ ಬೆಳಗಾವಿ ನಗರಕ್ಕೆ ಕುಡಿಯುವ ನೀರು

ಶಾಸಕ ಅನಿಲ ಬೆನಕೆ ಮಾಹಿತಿ -Drinking water to Belgaum city in 2 days

2 ದಿನದಲ್ಲಿ ಬೆಳಗಾವಿ ನಗರಕ್ಕೆ ಕುಡಿಯುವ ನೀರು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿ ನಗರದಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ನಗರಕ್ಕೆ ನೀರು ಪೂರೈಸುವ ಪಂಪ್ ಹೌಸ್ ಕೂಡ ನೀರಿನಲ್ಲಿ ಮುಳುಗಿತ್ತು. ಇದರಿಂದಾಗಿ ನೀರು ಎತ್ತಲಾಗದೆ ಬೆಳಗಾವಿ ನಗರಕ್ಕೆ ಕಳೆದ ಸುಮಾರು 10 ದಿನದಿಂದ ನೀರು ಪೂರೈಕೆ ಸ್ಥಗಿತವಾಗಿದೆ.

ಇಂದು ಶಾಸಕ ಅನಿಲ ಬೆನಕೆ ಹಿಂಡಲಗಾ ಪಂಪ್ ಹೌಸ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಮುಂಬೈನಿಂದ ಬಂದಿರುವ ತಂತ್ರಜ್ಞರು ಪಂಪ್ ಸರಿಪಡಿಸುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಪಂಪ್ ಸರಿಯಾಗಲಿದ್ದು, ನಗರಕ್ಕೆ ನೀರು ಪೂರೈಕೆ ಪುನಾರಂಭವಾಗಲಿದೆ ಎಂದು ಬೆನಕೆ ತಿಳಿಸಿದ್ದಾರೆ. ನೀರನ್ನು ಮಿತವಾಗಿ ಬಳಸುವಂತೆ ಅವರು ವಿನಂತಿಸಿದ್ದಾರೆ.

ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ತಿಂಗಳ ವೇತನ ನೀಡುವುದಾಗಿ ಅನಿಲ ಬೆನಕೆ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು. ಕ್ಷೇತ್ರದಲ್ಲಿ ಆಗಿರುವ ನಷ್ಟದ ಅಂದಾಜು ಮಾಡಲಾಗುತ್ತಿದೆ. 100 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಕೋರಲಾಗುವುದು ಎಂದು ಅವರು ತಿಳಿಸಿದರು.

ಗುರು ವಿವೇಕಾನಂದ ಮಲ್ಟಿಪರ್ಪಸ್ ಸೊಸೈಟಿ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಒಂದು ಲಕ್ಷ ರೂ. ನಿಡಿದೆ ಎಂದು ತಿಳಿಸಿದ ಶಾಸಕರು, ಸೊಸೈಟಿಗೆ ಕೃತಜ್ಞತೆ ಸಲ್ಲಿಸಿದರು. ಸಾರ್ವಜನಿಕರೂ ಕೈಲಾದಷ್ಟು ದೇಣಿಗೆಯನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಬೇಕು ಎಂದು ವಿನಂತಿಸಿದರು.