ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾಜಿ ಕಾಗಣಿಕರ -ಜಿ ಐ ಟಿ ಯಲ್ಲಿ "ಸಿರಿಗನ್ನಡ ಸಂಭ್ರಮ -೧೯" ಸಂಪನ್ನ

Vishwanath Patil Add

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿ ಐ ಟಿ ಕನ್ನಡ ಬಳಗ ಸಾಹಿತ್ಯೋತ್ಸವ ಸಿರಿಗನ್ನಡ ಸಂಭ್ರಮ -೧೯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Jolle Add

ಈ ಉತ್ಸವದ ಸಮಾರೋಪ ಸಮಾರಂಭಕ್ಕೆ ಗಾಂಧಿವಾದಿ, ಶಿಕ್ಷಣತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಶಿವಾಜಿ ಕಾಗಣಿಕರ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾಜಿ ಕಾಗಣಿಕರ ಅವರು ಶಿಕ್ಷಕರು ಸಮಾಜದ ಬಹಳ ಮುಖ್ಯವಾದ ವ್ಯಕ್ತಿಗಳು ಮತ್ತು ಅವರ ಸೇವೆಯ ಬಗ್ಗೆ ಅವರು ಹೆಚ್ಚಿನ ಗೌರವಕ್ಕೆ ಅರ್ಹರಾಗಿದ್ದಾರೆ. ಆದ್ದರಿಂದ ಇವತ್ತಿನ ಶಿಕ್ಷಕರು ತಮ್ಮ ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಇಂದಿನ ಶಿಕ್ಷಣ  ಉತ್ತಮ ಸ್ಥಿತಿಯಲ್ಲಿಲ್ಲ. ಆದ್ದರಿಂದ ಅಲ್ಲಿಯ ಬಡವನಿಗೆ ಉತ್ತಮ ಶಾಲೆ ನಿರ್ಮಿಸುವುದು ಇವತ್ತಿನ ಅಗತ್ಯವಾಗಿದೆ ಎಂದರು. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಭಾಗವಹಿಸಬೇಕು ಎಂದರು. ಸಮಾಜದ ಒಳಿತಿಗಾಗಿ ಎಲ್ಲರೂ ಕೆಲಸ ಮಾಡಬೇಕು ಎಂದು ಅವರು ಕರೆ ಕೊಟ್ಟರು.
ನಂತರ ನಡೆದ ಸಂಗೀತ ಸಂಜೆಯಲ್ಲಿ ಗಯಾ ವಾಸು ದೀಕ್ಷಿತ್ ಮತ್ತು ತಂಡದವರು ವಿದ್ಯಾರ್ಥಿಗಳನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ  ಎಂ. ಆರ್. ಕುಲಕರ್ಣಿ, ಕೆ ಎಲ್ ಎಸ್ ಸದಸ್ಯ ಎ. ಕೆ. ತಗಾರೆ, ಆರ್ ಎಸ ಮುತಾಲಿಕ್, ಪ್ರಾಚಾರ್ಯ ಪ್ರೊ. ಡಿ. ಎ. ಕುಲಕರ್ಣಿ, ಕಾಲೇಜಿನ ಡೀನರಾದ ಪ್ರೊ. ಎಂ ಎಸ್ ಪಾಟೀಲ್, ಪ್ರೊ ಎಸ್ ಬಿ ಹಾಲಬಾವಿ, ಕನ್ನಡ ಬಳಗದ ಸಂಯೋಜಕರುಗಳಾದ ಪ್ರೊ. ಕಿರಣ್ ತಂಗೋಡ್, ಪ್ರೊ. ಎಸ್. ಜಿ. ಕುಲಕರ್ಣಿ ಹಾಗೂ ಪ್ರೊ ಶಿವಕುಮಾರ್ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಹಾಜರಿದ್ದರು.