Advertisement -Home Add

ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಗೆ ನೂತನ ಅಧ್ಯಕ್ಷ

New President for Belgaum Chamber of Commerce

ಬೆಳಗಾವಿ ಚೆಂಬರ್ ಅಧ್ಯಕ್ಷರಾಗಿ ಶ್ರೀಧರ ಉಪ್ಪಿನ್

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ ಶ್ರೀಧರ ಉಪ್ಪಿನ್ ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಪ್ಪಿನ್ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪ್ಪಿನ್ ಈವರೆಗೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಇಂಡಸ್ಟ್ರಿ ಸೆಕ್ಟರ್ ಪ್ರತಿನಿಧಿಸುತ್ತಾರೆ.

ಉಪಾಧ್ಯಕ್ಷರಾಗಿ ಪಂಚಾಕ್ಷರಿ ಚೊಣ್ಣದ್, 2ನೇ ಉಪಾಧ್ಕ್ಷರಾಗಿ ಸಿ.ಸಿ.ಹೊಂಡದಕಟ್ಟಿ, ಗೌರವ ಖಜಾಂಚಿಯಾಗಿ ಈರಣ್ಣ ದಯಣ್ಣವರ್, ಗೌರವ ಕಾರ್ಯದರ್ಶಿಯಾಗಿ ಹೇಮೇಂದ್ರ ಪೋರವಾಲ, ಗೌರವ ಜಂಟಿ ಕಾರ್ಯದರ್ಶಿಯಾಗಿ ಸಂತೋಷ ಕಲಘಟಗಿ ಆಯ್ಕೆಯಾಗಿದ್ದಾರೆ.

ವಾಣಿಜ್ಯೋದ್ಯಮ ಸಂಘಧ ಕಾರ್ಯಕಾರಿ ಸಮಿತಿಯ 8 ಸ್ಥಾನಕ್ಕೆ ಪ್ರತಿವರ್ಷ ಚುನಾವಣೆ ನಡೆಯುತ್ತದೆ. ಅಧ್ಯಕ್ಷ ಸ್ಥಾನ ಒಂದು ವರ್ಷ ಅವಧಿಯದ್ದಿರುತ್ತದೆ.

ಇದನ್ನೂ ಓದಿ – ಚೆಂಬರ್ ಆಫ್ ಕಾಮರ್ಸ್ ಚುನಾವಣೆ; ಕೆಲವು ಅವಿರೋಧ ಆಯ್ಕೆ

ವಾಣಿಜ್ಯೋದ್ಯಮಿಗಳ ಅಹವಾಲು ಆಲಿಸಿದ ಸುರೇಶ ಅಂಗಡಿ

ವಾಣಿಜ್ಯೋದ್ಯಮ ಸಂಘದಿಂದ ರೈಲ್ವೆ ನಿಲ್ದಾಣದ ವ್ಯವಸ್ಥೆ ಪರಿಶೀಲನೆ