GIT add 2024-1
Laxmi Tai add
Beereshwara 33

ಶೀಘ್ರ ನಷ್ಟದ ಅಂದಾಜು ವರದಿ -ಲಕ್ಷ್ಮಿ ಹೆಬ್ಬಾಳಕರ್

ಯಾರಿಗೂ ಅನ್ಯಾಯವಾಗದಂತೆ ವರದಿ ಸಿದ್ದಪಡಿಸಿ ಪರಿಹಾರ

Anvekar 3
Cancer Hospital 2

ಶೀಘ್ರ ನಷ್ಟದ ಅಂದಾಜು ವರದಿ -ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿರುವ ನಷ್ಟದ ಕುರಿತು ಅತೀ ಶೀಘ್ರದಲ್ಲಿ ಅಂದಾಜು ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.

Emergency Service

ಗ್ರಾಮೀಣ ಕ್ಷೇತ್ರದಲ್ಲಿ ಗರಿಷ್ಟ ಪ್ರಮಾಣದಲ್ಲಿ ನಷ್ಟವಾಗಿದೆ. ಕಳೆದ ಒಂದು ವರ್ಷದಲ್ಲಿ ಮಾಡಿದ್ದ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಕೊಚ್ಚಿಕೊಂಡು ಹೋಗಿವೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳೂ ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಕ್ಷೇತ್ರದ ಹಲವೆಡೆ ಪ್ರವಾಹ ನಷ್ಟದ ಪರಿಶೀಲನೆ ನಡೆಸಿದ ಅವರು, ನಷ್ಟದ ಅಂದಾಜು ಸಿದ್ಧಪಡಿಸಿದ ಅಧಿಕಾರಿಗಳಿಗೂ ಸೂಚಿಸಲಾಗಿದೆ. ನಮ್ಮ ತಂಡವೂ ಸಿದ್ಧಪಡಿಸಲಿದೆ. ಎರಡನ್ನೂ ಕ್ರೋಢೀಕರಿಸಿ ಅಂತಿಮ ವರದಿ ತಯಾರಿಸಲಾಗುವುದು. ತ್ರದ ಹಲವಾರು ಕುಟುಂಬಗಳು ಮನೆ, ಹೊಲಗದ್ದೆ ಹಾಗೂ ಬೆಳೆಗಳನ್ನು ಕಳೆದುಕೊಂಡಿದವೆ. ಯಾರಿಗೂ ಅನ್ಯಾಯವಾಗದಂತೆ ವರದಿ ಸಿದ್ದಪಡಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು  ಹೆಬ್ಬಾಳಕರ್ ತಿಳಿಸಿದರು.

ಇಂದು ಬೆಳಗ್ಗೆ 6 ಗಂಟೆಯಿಂದ ಬೆಳಗುಂದಿ, ರಕ್ಕಸಕೊಪ್ಪ, ಸೋನೊಲಿ, ಎಳೆಬೈಲ್ ಗ್ರಾಮಗಳಿಗೆ ಭೇಟಿ ಕೊಟ್ಟು ನಿರಾಶ್ರಿತರ ಸಂಕಷ್ಟಗಳಿಗೆ ಸ್ಪಂದಿಸಿದರು.  ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯಿಂದ ಬಿ ಜಿ ರಘು, ಎಚ್ ಜಿ ಗಣೇಶ, ಬಿ ಜಿ ಮಲ್ಲೇಶಪ್ಪ, ಕರಿಯಪ್ಪ ಹಾಗೂ ಅವರ ಸಹಚರರು ಸುಮಾರು ಆರವತ್ತು ಜನ ಕ್ಷೇತ್ರಕ್ಕೆ ಆಗಮಿಸಿ ನಿರಾಶ್ರಿತರಿಗೆ, ಬಟ್ಟೆ, ತಿಂಡಿ ತಿನಿಸುಗಳ ಸಹಾಯವನ್ನು ಮಾಡಿ ಮಾನವೀಯತೆ ಮೆರೆದರು. ಸಹಾಯ ಮಾಡಿದ ಎಲ್ಲರಿಗೂ ಕ್ಷೇತ್ರದ ಜನರ ಪರವಾಗಿ ಲಕ್ಷ್ಮಿ ಹೆಬ್ಬಾಳಕರ್ ಧನ್ಯವಾದ ಸಲ್ಲಿಸಿದ್ದಾರೆ.

 

Bottom Add3
Bottom Ad 2