World Environment Day

ಸಾಂಕೇತಿಕವಾಗಿ ವಿಶ್ವ ಆರೋಗ್ಯ ದಿನ ಆಚರಣೆ

ಹಗಲಿರುಳೆನ್ನದೇ ರೋಗಿಗಳ ಸೇವೆಮಾಡುವ ದಾದಿಯರ ಸೇವೆಗೆ ಮೆಚ್ಚುಗೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಲಾಕ್‌ಡೌನ್ ನಡುವೆಯು ಜೀವದ ಹಂಗುತೊರೆದು ಆಸ್ಪತ್ರೆಗೆ ಬರುವ ರೋಗಿಗಳ ಸೇವೆಯಲ್ಲಿ ನಿರತರಾದ ದಾದಿಯರಿಗೆ  ಪುಷ್ಪಾರ್ಪಣೆ ಮಾಡುವ ಮೂಲಕ ಸಾಂಕೇತಿಕವಾಗಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಕೊರೊನಾ ಎಂಬ ವೈರಾಣು ಉಸಿರಾಟ ಕ್ರಿಯೆಯಲ್ಲಿ ತೊಂದರೆ ಹಾಗೂ ಜೀವ ಹಿಂಡುವ ಕ್ರೂರ ಕಾಯಿಲೆಯು ದೇಶದ ಎಲ್ಲಡೆ ಭಯವನ್ನು ಹುಟ್ಟಿಸಿದೆ. ಇಂತಹ ಸಂದರ್ಭದಲ್ಲಿ ತಮ್ಮ ಹಿತಾಸಕ್ತಿಗಳನ್ನು ಬದಿಗಿಟ್ಟು, ಹಗಲಿರುಳೆನ್ನದೇ ರೋಗಿಗಳ ಸೇವೆಮಾಡುವ ದಾದಿಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವರ್ಷದ (೨೦೨೦) ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆಯಾದ ಕೋವಿಡ್-೧೯ ವಿರುದ್ದ ಹೋರಾಡುತ್ತಿರುವ ಎಲ್ಲ ದಾದಿಯರಿಗೆ ಹಾಗೂ ಶುಶ್ರೂಷಕಿಯರಿಗೆ ಸಮರ್ಥನೆ ನೀಡಿ ಎಂಬುದರ ಬಗ್ಗೆಯೂ ಮತ್ತು ಈ ವರ್ಷವನ್ನು ಶುಶ್ರೂಷಕಿಯರ ದಾದಿಯರ ವರ್ಷವಾಗಿ ಆಚರಿಸುವ ಬಗ್ಗೆ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ. ಆರ್ ಆರ್ ವಾಳ್ವೇಕರ, ಡಾ. ಮೊಹಮ್ಮದ್ ಜಿಯಾ ಗುತ್ತಿ, ಹಿರಿಯ ಶಸ್ತ್ರಚಿಕಿತ್ಸಜ್ಞ ಡಾ. ಎ ಕೆ ರಡ್ಡೆರ್, ಪ್ರಯೋಗಶಾಲಾ ವಿಭಾಗದ ಮುಖ್ಯಸ್ಥ ಡಾ. ಅಶೋಕ ಅಲತಗಿ, ಮೂತ್ರಶಾಸ್ತ್ರಜ್ಞ ಡಾ. ಅಮೆಯ ಪಥಾಡೆ ಹಾಗೂ ಆಸ್ಪತ್ರೆಯ ದಾದಿಯರು ಮತ್ತು ಇನ್ನುಳಿದ ಸಿಬ್ಬಂದಿ ಸುರಕ್ಷಿತ ಅಂತರದಲ್ಲಿ ಉಪಸ್ಥಿತರಿದ್ದರು.