Belagavi NewsBelgaum NewsKannada NewsKarnataka News

*ಬಿಸಿಸಿಐ ಚುನಾವಣೆ : ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ:*  ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ (ಬಿಸಿಸಿಐ)ನ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

ಟ್ರೇಡಿಂಗ್ ಸೆಕ್ಟರ್ ನ ಲೈಫ್ ಮೆಂಬರ್ಸ್  5 ಸ್ಥಾನ, ಸಾಮಾನ್ಯ ಕ್ಷೇತ್ರದ ಒಂದು ಸ್ಥಾನ, ಇಂಡಸ್ಟ್ರೀಸ್ ಸೆಕ್ಟರ್ ನ ಲೈಫ್ ಮೆಂಬರ್ಸ್ ನ 3 ಸ್ಥಾನ ಹಾಗೂ ಸಾಮಾನ್ಯ ಕ್ಷೇತ್ರದ ಒಂದು ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಆದರೆ ಎಲ್ಲ ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾದರು.

ಟ್ರೇಡಿಂಗ್ ಸೆಕ್ಟರ್ ನಿಂದ ಸಂಜಯ್ ಪೊತದಾರ್, ರಾಜೇಂದ್ರ ಮುತಗೇಕರ,  ವಿಕ್ರಮ್‌ಕುಮಾರ್ ಜೈನ್, ವೈಭವ್ ವೆರ್ಣೇಕರ, ನಿತಿನ್ ಪೋರ್ವಾಲ್  ಆಯ್ಕೆಯಾದರು. ಟ್ರೇಡಿಂಗ್ ಸೆಕ್ಟರ್ ಸಾಮಾನ್ಯ ಕ್ಷೇತ್ರದಿಂದ ಸುಧೀರ ಚೌಗುಲೆ ಆಯ್ಕೆಯಾಗಿದ್ದಾರೆ.

ಇಂಡಸ್ಟ್ರೀಸ್ ಸೆಕ್ಟರ್ ಆಜೀವ ಸದಸ್ಯರ ಕ್ಷೇತ್ರದಿಂದ ಸತೀಶ್ ಕುಲಕರ್ಣಿ, ಆನಂದ್ ದೇಸಾಯಿ ಮತ್ತು ಅಶೋಕ್ ಕೋಳಿ ಆಯ್ಕೆಯಾದರು. ಇಂಡಸ್ಟ್ರೀಸ್ ಸೆಕ್ಟರ್ ಸಾಮಾನ್ಯ ಕ್ಷೇತ್ರದಿಂದ ಬಸವರಾಜ್ ರಾಂಪುರೆ ಆಯ್ಕೆಯಾದರು.

*ರಿಟರ್ನಿಂಗ್ ಆಫೀಸರ್ ಆಗಿ ಅಡ್ವೊಕೇಟ್ ಪ್ರವೀಣ್ ಎಸ್. ಪರಮಶೆಟ್ಟಿ ಹಾಗೂ ಪ್ರವೀಣ ಎಸ್. ರಂಗೋಲೆ ಕಾರ್ಯನಿರ್ವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button