ಬೆಳಗಾವಿ : ಪಿಎಮ್-ಕಿಸಾನ್ – ಆನ್‌ಲೈನ್ ನೋಂದಣಿಗೆ ಅವಕಾಶ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಇನ್ನೂ ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸದೇ ಇರುವ ಉಳಿದ ರೈತಬಾಂಧವರು ಹತ್ತಿರದ ಗ್ರಾಮ ಪಂಚಾಯತ, ಅಟಲಜೀ ಜನ ಸ್ನೇಹಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖಾ ಕಛೇರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ಹಾಲು ಉತ್ಪಾದಕರ ಸಹಕಾರ ಸಂಘ ಹೀಗೆ ಯಾವುದಾದರೊಂದು ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಉಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಸದರಿ ಯೋಜನೆಯಡಿ ರೈತರು ಯಾವುದೇ ಸ್ಥಳದಿಂದ ಆನ್‌ಲೈನ ಮೂಲಕ ಖುದ್ದಾಗಿ ತಾವೇ ನೋಂದಣಿಮಾಡಿಕೊಳ್ಳಲು ಹಾಗೂ ಸ್ವಯಂ ಘೋಷಣಾ ಪತ್ರವನ್ನು ಅಪ್‌ಲೋಡ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ರೈತಬಾಂಧವರು ವೆಬ್‌ಸೈಟನಲ್ಲಿ ತಾವು ಇದ್ದ ಸ್ಥಳದಿಂದಲೇ ನೋಂದಣಿ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಲ ಮನ್ನಾ ಸೌಲಭ್ಯ ಗಡುವು ವಿಸ್ತರಣೆ
ರಾಜ್ಯದ ರೈತರು ಸಹಕಾರ ಸಂಘ, ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ಜುಲೈ ೧೦, ೨೦೧೮ ಕ್ಕೆ ಸುಸ್ತಿಯಾಗಿರುವ ಸಾಲಗಳಿಗೆ ಹಾಗೂ ಜುಲೈ ೧೦, ೨೦೧೮ ಕ್ಕೆ ಚಾಲ್ತಿ ಇದ್ದು, ಈಗಾಗಲೆ ಗಡುವು ಮುಗಿದಿರುವ ಸಾಲಗಳಿಗೆ ರೂ. ೧ ಲಕ್ಷಗಳಿಗಿಂತ ಹೆಚ್ಚಿನ ಅಸಲು ಮತ್ತು ಮರುಪಾವತಿ ದಿನಾಂಕದವರೆಗಿನ ಸಂಪೂರ್ಣ ಬಡ್ಡಿಯನ್ನು ರೈತರು ಪಾವತಿಸಿ ರೂ. ೧ ಲಕ್ಷಗಳವರೆಗಿನ ಸಾಲಮನ್ನಾ ಸೌಲಭ್ಯ ಪಡೆಯಲು ಸರ್ಕಾರ ಜುಲೈ ೩೧, ೨೦೧೯ ರವರೆಗೆ ಕಾಲಾವಕಾಶ ನೀಡಿರುತ್ತದೆ.
ಕಾರಣ ಜಿಲ್ಲೆಯಲ್ಲಿನ ಸಾಲ ಮನ್ನಾ ಫಲಾನುಭವಿ ರೈತರು ವಿಸ್ತರಣೆ ಮಾಡಿದ ಅವಧಿಯ ಸದುಪಯೋಗ ಪಡೆದುಕೊಳ್ಳಲು ಬೆಳಗಾವಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ ಆತ್ಮ ಯೋಜನೆಯ ಅಡಿಯಲ್ಲಿ, ೨೦೧೯-೨೦ ನೇ ಸಾಲಿನ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ, ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ರೈತರಿಗೆ, ತಾಲೂಕ ಮಟ್ಟದಲ್ಲಿ, ಪ್ರತಿ ತಾಲೂಕಿನಲ್ಲಿ ೦೫ ಜನ ರೈತರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಒಟ್ಟು ೧೦ ಜನ ರೈತರಿಗೆ ಆತ್ಮ ಯೋಜನೆಯ ’ಶ್ರೇಷ್ಠ ಕೃಷಿಕ’ ಪ್ರಶಸ್ತಿಗಳಿಗಾಗಿ, ಮತ್ತು ಜಿಲ್ಲಾ ಮಟ್ಟದಲ್ಲಿ ಒಟ್ಟು ೦೫ ’ಶ್ರೇಷ್ಠ ಆಸಕ್ತ ರೈತರ ಗುಂಪು’ಗಳ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಅರ್ಜಿ ನಮೂನೆಯನ್ನು ಸಂಬಂಧಪಟ್ಟ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಜುಲೈ ೩೦ ಸಾಯಂಕಾಲ ೫ ಗಂಟೆ ರೊಳಗಾಗಿ ಸಲ್ಲಿಸತಕ್ಕದ್ದು. ತಡವಾಗಿ ಸಲ್ಲಿಸಿದ ಹಾಗೂ ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಜುಲೈ ೩೦ ಸಾಯಂಕಾಲ ೫ ಗಂಟೆ ರೊಳಗಾಗಿ ಸಲ್ಲಿಸತಕ್ಕದ್ದು. ತಡವಾಗಿ ಸಲ್ಲಿಸಿದ ಹಾಗೂ ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಈಗಾಗಲೇ ಸರ್ಕಾರದಿಂದಾಗಲೀ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದಾಗಲೀ ಮೇಲ್ಕಾಣಿಸಿದ ವಿಷಯಗಳಲ್ಲಿ ಸಮನಾದ ಪ್ರಶಸ್ತಿಗಳನ್ನು ಪಡೆದ ರೈತರು ಹಾಗೂ ಅವರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಆದರೆ ತಾಲೂಕ ಮಟ್ಟದಲ್ಲಿ ಪ್ರಶಸ್ತಿ ಪಡೆದ ರೈತರು ಜಿಲ್ಲಾ ಮಟ್ಟದ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಓರ್ವ ರೈತ ಒಂದೇ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕೆಂದು ಬೆಳಗಾವಿ ಆತ್ಮ ಯೋಜನೆ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////
ಹೆಚ್ಚಿನ ವಿವರಗಳಿಗಾಗಿ ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕೆಂದು ಬೆಳಗಾವಿ ಆತ್ಮ ಯೋಜನೆ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ