https://youtu.be/b7q1vXGTgRA
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪರಿವರ್ತನ ಪರಿವಾರ
ಆಯೋಜಿಸಿರುವ 10ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಬೆಳಗಾವಿ ಸಜ್ಜಾಗಿದೆ.
ಇದೇ 18ರಿಂದ 21ರ ವರೆಗೆ ಬಿ.ಎಸ್. ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಉತ್ಸವ ನಡೆಯುವುದು.
ಈ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಕಳೆದ ಒಂಬತ್ತು ವರ್ಷಗಳಿಂದ ಆಚರಿಸುತ್ತಾ ಬಂದಿರುವುದು ಜಾಗತಿಕ ಮಟ್ಟದಲ್ಲಿ ಬೆಳಗಾವಿ ಹೆಸರು ಮಾಡುವಂತೆ ಮಾಡಿದೆ. ಈ ಹಬ್ಬವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅದಲ್ಲದೆ, ಬೆಳಗಾವಿ ನಗರದಲ್ಲಿ ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಅಭಯ ಪಾಟೀಲ ತಿಳಿಸಿದರು.
ಈ ಹಬ್ಬದಲ್ಲಿ ಎಲ್ಲ ಯುವ ಜನತೆಯ ಹಾಗೂ ಶಾಲಾ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಒಳ್ಳೆ ವೇದಿಕೆಂಯನ್ನು ಕಲ್ಪಿಸಿಕೊಟ್ಟಿದ್ದು, ಇದರಿಂದ ಅವರ ಪ್ರತಿಭೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಂಯ ಮಟ್ಟದಲ್ಲಿ ಬೆಳೆಂಯಲು ಕಾರಣವಾಗಿದೆ. ಹೊಸವರುಷ ಹಾಗೂ ಕ್ರಿಸ್‌ಮಸ್‌ಗೆ ಬಂದ ವಿದೇಶಿ ಪ್ರವಾಸಿಗರು ಈ ಅಂತರಾಷ್ಟ್ರೀಯ ಪತಂಗೋತ್ಸವಕ್ಕೆ ಬರುವ ವಾಡಿಕೆ ಹೆಚ್ಚುತ್ತಿದ್ದು
ಪ್ರವಾಸೋದ್ಯಮ ಬೆಳೆಯಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಗೋವಾ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಮತ್ತು ಗೋವಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಳೆದ ೫ ವರ್ಷದಿಂದ ಆಚರಿಸಲಾಗುತ್ತಿದ್ದು ಬಹಳ
ಮೆಚ್ಚುಗೆಯನ್ನು ಪಡೆದುಕೊಂಡು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಒಳ್ಳೆಯ ಹೆಸರನ್ನು ಗಳಿಸಲು ಸಹಾಯಕವಾಗಿದೆ. ಇದೇ ರೀತಿ ನಂತರ ಹುಬ್ಬಳಿ ಯಲ್ಲೂ ೩ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
೧೦ನೇ ಬೆಳಗಾವಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಮತ್ತಷ್ಟು ಉತ್ತಮಗೊಳಿಸಲು ಪರಿವರ್ತನ ಪರಿವಾರ ಸಜ್ಜಾಗಿದೆ. ಈ ಕಾರ್ಯಕ್ರಮ ಎಲ್ಲ ಜನರನ್ನು ನಾನಾ ಭಾಗಗಳಿಂದ ಆಕರ್ಷಿಸುತ್ತಿದ್ದು, 5 ರಾಜ್ಯಗಳಿಂದ 25 ರಾಷ್ಟ್ರೀಯ ಮತ್ತು 15 ಅಂತರಾಷ್ಟ್ರೀಯ ಗಾಳಿಪಟ ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಈ ಹಬ್ಬದಲ್ಲಿ ಗಾಳಿಪಟ ಉತ್ಸವದ ಜೊತೆಗೆ ಯುವ ಜನತೆಗಾಗಿ ಉಮಂಗ್ ಯುತ್ ಫೆಸ್ಟಿವಲ್,
ಶಾಲಾ ಮಕ್ಕಳಿಗಾಗಿ ಮಕ್ಕಳ ಹಬ್ಬ ಮತ್ತು ಬಲೂನ್ ಫೆಸ್ಟಿವಲ್ ಆಯೋಜಿಸಲಾಗಿದೆ. ಇದರ ಜೊತೆಗೆ ಡಿಜೆ ಶೋ ಮತ್ತು ಪಟಾಕಿ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನೂ ಕೂಡ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗೆ –
ಅಶೋಕ ನಾಯ್ಕ ೯೮೪೫೩೯೮೦೦೭, ಚೈತನ್ಯ ಕುಲಕರ್ಣಿ ೯೩೪೧೧೦೧೭೯೭,
ಗಣೇಶ ಮಳಲಿಕರ ೯೯೮೦೫೬೫೪೬೦, ಸತೀಶ ಕುಲಕರ್ಣಿ ೯೮೮೬೪೪೯೦೯೯,
ದೀಪಕ ಗೊಜಗೆಕರ ೯೪೪೮೧೧೬೩೧೮, ಸಂದೇಶ ಕಡ್ಡಿ ೯೪೪೮೧೦೨೨೮.
ಜ.18-21: ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ