Belagavi NewsBelgaum NewsCrimeKannada NewsKarnataka NewsNational

*ಹರಿತವಾದ ಆಯುಧ ಹೊಂದಿದ ವ್ಯಕ್ತಿಯನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾನೂನು ಬಾಹಿರವಾಗಿ ಮಾರಕಾಸ್ತ್ರ ಹೊಂದಿದ ವ್ಯಕ್ತಿಯನ್ನು ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸ್‌ರು ಬಂಧಿಸಿ ಹರಿತವಾದ ಆಯುಧವನ್ನು ಜಪ್ತಿ ಮಾಡಿಕೊಂಡಿದ್ದಾರೆ.‌

ಮಾಳಮಾರುತಿ ಪೊಲೀಸ್ ಠಾಣೆಯ ಪಿಎಸ್ಐ ಉದಯ ಪಾಟೀಲ್ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಂಶಯಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡುತ್ತಿರುವಾಗ ಜಿನೇಂದ್ರ ಪದ್ಮಪ್ಪ ಚೌಗಲೆ ಎಂಬಾತ ಬಸವನ ಕುಡಚಿಯ ಶಾಸ್ತ್ರಿ ಗಲ್ಲಿಯಲ್ಲಿ ತನ್ನ ಕೈಯಲ್ಲಿ ಕಾನೂನು ಬಾಹಿರವಾಗಿ ಹರಿತವಾದ ತಲವಾರ ಹಿಡಿದುಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸುತ್ತಿದ್ದಾಗ ಆರೋಪಿತನನ್ನು ವಶಪಡಿಸಿಕೊಂಡು ಆತನಿಂದ ಹರಿತವಾದ ತಲವಾರ ಜಪ್ತಪಡಿಸಿಕೊಳ್ಳಲಾಗಿದೆ. 

ಆರೋಪಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆ ಪ್ರ ಸಂ. 55/2026 ಕಲಂ.27(1) ಇಂಡಿಯನ್ ಆರ್ಮ್ಸ್ ಆಕ್ಷ & ಕಲಂ. 97 ಕೆ.ಪಿ. ಆಕ್ಷ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.

Home add -Advt

Related Articles

Back to top button