Belagavi NewsBelgaum NewsCrimeKannada NewsKarnataka NewsNationalPolitics
*ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿ 4 ಲಕ್ಷ 59 ಸಾವಿರ ರೂ ಮೌಲ್ಯದ ಬಂಗಾರ ಮತ್ತು ವಾಹನ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ನಗರಸ ಉದ್ಯಮಬಾಗ ಪೊಲೀಸ ಠಾಣೆಯ ಪೊಲೀಸರಿಂದ ರಾಮಚಂದ್ರ ಪಕ್ಕೀರಪ್ಪ ತಳವಾರ (21) ಹಾಗೂ ಸುರೇಶ ಲಕ್ಕಪ್ಪ ಪಾಟೀಲ (33) ಎಂಬುವರನ್ನು ಬಂಧಿಸಲಾಗಿದೆ.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿಗಳು ಉದ್ಯಮಬಾಗ ಮತ್ತು ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
10 ಸಾವಿರ ಮೌಲ್ಯದ 0.300 ಗ್ರಾಂ ತೂಕದ ಬಂಗಾರದ ಉಂಗುರ. ನಗದು ಹಣ 60,000 ರೂ. 2 ಲಕ್ಷ ಮೌಲ್ಯದ ಕಾರ್ 1.80 ಲಕ್ಷ ಮೌಲ್ಯದ ಎರಡು ಬೈಕ್ 9, 000 ರೂ. ಮೌಲ್ಯದ ಎರಡು ಮೋಬೈಲ್ ವಶಕ್ಕೆ ಪಡೆಯಲಾಗಿದೆ.
ಒಟ್ಟು 4,59,000 ರೂ ಮೌಲ್ಯದ ಬಂಗಾರದ ಆಭರಣ, ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

