ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚಿಗೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದರ ಬೆನ್ನು ಹತ್ತಿದ ಅಥಣಿ ಪೊಲೀಸು ಮೋಟಾರ ಸೈಕಲ ಕಳ್ಳರ ಬಂಧನ ಮಾಡಿ ಸುಮಾರು 4, 75,000 ಬೆಲೆಯ ಸ್ವತ್ತು ವಶಕ್ಕೆ ಪಡೆದಿದ್ದಾರೆ
ಪ್ರಕರಣ ಪತ್ತೆ ಹಚ್ಚಲು ಬೆಳಗಾವಿ ಎಸ್ ಪಿ ಡಾ. ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ ಪಿಗಳಾದ ಶ್ರುತಿ ಎನ್. ಎಸ್, ಪ್ರಶಾಂತ ಮುನ್ನೋಳಿ, ಅಥಣಿ ಡಿಎಸ್‌ಪಿ ಮತ್ತು ಅಥಣಿ ಸಿಪಿಐ ರವೀಂದ್ರ ಕೆ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಎಮ್ ಬಿ ಬಿರಾದಾರ, ಪಿ ನಾಗರಾಜ, ಶಿವಾನಂದ ಕಾರಜೋಳ ಅವರ ತಂಡ ರಚನೆ ಮಾಡಲಾಗಿತ್ತು. ಸದರಿ ಅಪರಾಧ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸೆ 29 ರಂದು ಪತ್ತೆ ಕಾರ್ಯದಲ್ಲಿ ಇರುವಾಗ ಅಥಣಿ ಪಟ್ಟಣದ ಶಿವಾಜಿ ಸರ್ಕಲ್ ಹತ್ತಿರ ಅನುಮಾನಾಸ್ಪದವಾಗಿ ಸಿಕ್ಕ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಆರೋಪಿತರು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯ ಅಥಣಿ ಪಟ್ಟಣದ ವಿದ್ಯಾ ನಗರದಲ್ಲಿ ನಿಲ್ಲಿಸಿದ್ದ ಮೋಟಾರ ಸೈಕಲ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಆರೋಪಿಗಳಾದ ಅಮೋಲ ಜಿತೇಂದ್ರ ಪವಾರ ಮತ್ತು ಲಖನ ತಮಣ್ಣಾ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಸುಂಗಾರೆ ಪಟ್ಟಣದಲ್ಲಿ ಮೋಟಾರ ಸೈಕಲಗಳನ್ನು ಕಳ್ಳತನ ಮಾಡಿ ಮದಬಾಂವಿ ಗ್ರಾಮದ ಆರೋಪಿತನ ಮನೆಯ ಮುಂದೆ 6 ವಾಹನ ಇಟ್ಟ ಬಗ್ಗೆ ಮತ್ತು ಮದಬಾಂವಿ ಗ್ರಾಮದಲ್ಲಿ ಜನರಿಗೆ 6 ಮೋಟಾರ ಸೈಕಲಗಳನ್ನು ಮಾರಾಟ ಮಾಡಿ ನಂತರ ದಾಖಲಾತಿ ನೀಡುವದಾಗಿ ಹೇಳಿ ಅವರಿಂದ ಹಣ ಪಡೆದುಕೊಂಡಿರುವದಾಗಿ ಹೇಳಿಕೆ ನೀಡಿದ್ದರಿಂದ ಸದರಿ ಆರೋಪಿತರಿಂದ ಅಥಣಿ ಪಟ್ಟಣದಲ್ಲಿ ಕಳ್ಳತನ ಮಾಡಿದ್ದ ವಿವಿಧ ಕಂಪನಿಯ 475000ರೂ ಕಿಮ್ಮತ್ತಿನ ಒಟ್ಟು 13 ಮೊಟಾರ ಸೈಕಲಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ