Belagavi NewsBelgaum NewsKarnataka NewsLatest

*ಕಳ್ಳರನ್ನು ಬಂಧಿಸಿ 11 ಬೈಕ್ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಖಾನಾಪುರ, ಬೈಲಹೊಂಗಲ ಸೇರಿ ವಿವಿಧ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಕಿತ್ತೂರು ಪೊಲೀಸರು ಬಂಧಿಸಿ, 11 ಬೈಕ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಲಹೊಂಗಲ ಡಿಎಸ್ಪಿ ರವಿ ಡಿ. ನಾಯ್ಕ, ಕಿತ್ತೂರು ಪ್ರಭಾರಿ ಸಿಪಿಐ ಎಸ್.ಸಿ ಪಾಟೀಲ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರವೀಣ ಗಂಗೋಳ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೈಕ್‌ ಕಳ್ಳತನ ಮಾಡಿ ಬೇರೆ ಬೇರೆ ಗ್ರಾಮಗಳಲ್ಲಿ ಜನರಿಗೆ ಮಾರಾಟ ಮಾಡುತ್ತಿದ್ದ ಕಿತ್ತೂರು ತಾಲ್ಲೂಕಿನ ದೇಮಟ್ಟಿ ಗ್ರಾಮದ ಪುಂಡಲೀಕ ಸಿದ್ದಪ್ಪ ಕುರಿ ಹಾಗೂ ಸುಲೇಮಾನ ರೆಹಮಾನಸಾಬ ಹವಾಲ್ದಾ‌ರ್ ಆರೋಪಿಗಳು ಎಂದು ಗುರುತಿಸಲಾಗಿದೆ.

ಈ ಪ್ರಕರಣವನ್ನು ಬೆನ್ನತ್ತಿದ ಕಿತ್ತೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಬೇರೆ ಬೇರೆ ಊರಿನಲ್ಲಿದ್ದ ಬೈಕ್‌ಗಳನ್ನು ಪತ್ತೆ ಹಚ್ಚಿ ಸುಮಾರು 5 ಲಕ್ಷ ಮೌಲ್ಯದ 11 ಬೈಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Home add -Advt

Related Articles

Back to top button