Latest

ಎಲ್ಲಾ ಬ್ಯಾಂಕ್ ಎಟಿಎಂ ಗಳಿಗೂ ಕಾರ್ಡ್ ಲೆಸ್ ಕ್ಯಾಶ್ ಸೌಲಭ್ಯ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಆರ್ ಬಿ ಐ ಮಾನಿಟರಿ ಪಾಲಿಸಿ ಕಮಿಟಿ ಸಭೆ ನಡೆದಿದ್ದು, ಸತತ 11ನೇ ಬಾರಿಗೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಪ್ರಸ್ತುತ ದೇಶದಲ್ಲಿ ರೆಪೊ ದರ ಶೇ.4ರಷ್ಟಿದ್ದು, ರಿಸರ್ವ್ ರೆಪೊ ದರ ಶೇ.3.35ರಷ್ಟಿದೆ. ಇದೆ ರೀತಿ ಈಬಾರಿಯೂ ಮುಂದುವರೆಯಲಿದೆ. ಗ್ರಾಹಕರ ಗೃಹ ಸಾಲ, ವೈಯಕ್ತಿಕ ಇಎಂಐ ಸಹ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದರು.

Home add -Advt

ಇದೇ ವೇಳೆ ದೇಶದ ಎಲ್ಲಾ ಎಟಿಎಂ ಗಳಲ್ಲಿ ಕಾರ್ಡ್ ಲೆಸ್ ಕ್ಯಾಶ್ ಸೌಲಭ್ಯ ಕಲ್ಪಿಸಲಾಗುವುದು. ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಮೂಲಕ ಈ ಸೌಲಭ್ಯವನ್ನು ಎಲ್ಲಾ ಬ್ಯಾಂಕ್ ಹಾಗೂ ಎಟಿಎಂಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕಾರ್ಡ್​ರಹಿತ ಪಾವತಿ ವಿಧಾನಗಳ ಅಳವಡಿಕೆಯಿಂದ ಸ್ಕಿಮಿಂಗ್ ಮತ್ತು ಕಾರ್ಡ್​ ಕ್ಲೋನಿಂಗ್​ನಂಥ ಅಕ್ರಮಗಳನ್ನೂ ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
ಬಂಡವಾಳ ಹೂಡಿಕೆದಾರರ ವಿಶ್ವಾಸ ಕಳೆದುಕೊಳ್ಳುತ್ತಿದೆಯೇ ಕರ್ನಾಟಕ ?

Related Articles

Back to top button