ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಹಾರಾಷ್ಟ್ರದಲ್ಲಿ ಕೊರೋನಾ, ಡೆಲ್ಟಾ ಪ್ಲಸ್ ವೈರಸ್ ಆತಂಕ ಹೆಚ್ಚುತ್ತಿದ್ದಂತೆ ಬೆಳಗಾವಿ ಗಡಿಯಲ್ಲಿ ತಪಾಸಣೆ ಹೆಚ್ಚಿಸಲಾಗಿದೆ.
ಮಹಾರಾಷ್ಟ್ರದಿಂದ ಬರುವ ಪ್ರತಿಯೊಂದು ವಾಹನವನ್ನೂ ತಪಾಸಿಸಲಾಗುತ್ತಿದೆ. ವಾಹನದಲ್ಲಿದ್ದವರು ನೆಗೆಟಿವ್ ರಿಪೋರ್ಟ್ ಹೊಂದಿದ್ದಾರಾ ಎನ್ನುವುದನ್ನು ಚೆಕ್ ಮಾಡಲಾಗುತ್ತಿದೆ. ನೆಗೆಟಿವ್ ರಿಪೋರ್ಟ್ ಇಲ್ಲದಿದ್ದಲ್ಲಿ ಅವರನ್ನು ಕೆಳಗಿಳಿಸಲಾಗುತ್ತಿದೆ.
ಮಿರಜ್ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಬಸ್ ನಲ್ಲಿ ಸಾಮಾಜಿಕ ಅಂತರ ಪಾಲಿಸದಿರುವ ಮತ್ತು ಕೆಲವರಲ್ಲಿ ನೆಗೆಟಿವ್ ರಿಪೋರ್ಟ್ ಇಲ್ಲದ ಹಾಗೂ ವ್ಯಾಕ್ಸಿನೇಶನ್ ಮಾಡಿಸದ ಕಾರಣಕ್ಕಾಗಿ ಬಸ್ ವಾಪಸ್ ಕಳಿಸಲಾಗಿದೆ.
ಕೋಗನೋಳಿ, ಕಾಗವಾಡ, ಮಿರಜ್ ಮೊದಲಾದೆಡೆ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ