Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಪೊಲೀಸರ ವಿನೂತನ ಕ್ರಮ*; *ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ ಎಂದು ಜಾಗೃತಿ ಮೂಡಿಸಿ ಸುಸ್ತಾದ ಬೆಳಗಾವಿ ಪೊಲೀಸರು ಇದೀಗ ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ. ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವವರ ಕೈಯಲ್ಲಿ ಫಲಕ ಕೊಟ್ಟು ಜಾಗೃತಿಗೆ ನಿಲ್ಲಿಸಲಾಗುತ್ತಿದೆ!!

ಹೆಲ್ಮೆಟ್ ಧರಿಸವರಿಗೆ ದಂಡ ಹಾಕಿ ನೋಡಿದರು, ಗುಲಾಬಿ ಹೂವು ಕೊಟ್ಟು ನೋಡಿದರು. ಬೇರೆ ಬೇರೆ ರೀತಿ ಜಾಗೃತಿ ಮೂಡಿಸಿ, ಮನವಿ ಮಾಡಿ ನೋಡಿದರು. ಆದರೂ ಜನರಲ್ಲಿ ಜಾಗೃತಿ ಮೂಡದ್ದರಿಂದ ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ.

ಕಳೆದ ವಾರ ನಾಲ್ಕಾರು ಪೊಲೀಸ್ ಸಿಬ್ಬಂದಿಗೇ ಹೆಲ್ಮೆಟ್ ಧರಿಸದ್ದರಿಂದ ದಂಡ ವಿಧಿಸಲಾಗಿತ್ತು. ಇದೀಗ, ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಬಂದವರನ್ನು ನಿಲ್ಲಿಸಿ ಅವರ ಕೈಯಲ್ಲಿ, ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ, ಇಲ್ಲವಾದಲ್ಲಿ ನಮ್ಮ ಹಾಗೆ ಜಾಗೃತಿ ಮೂಡಿಸಬೇಕಾಗುತ್ತದೆ ಎನ್ನುವ ಫಲಕವನ್ನು ಹಿಡಿದು ನಿಲ್ಲಿಸಲಾಗುತ್ತಿದೆ.

Home add -Advt

ಪೊಲೀಸರ ಹೊಸ ಕ್ರಮ ಯಾವ ರೀತಿಯಲ್ಲಿ ಪರಿಣಾಮ ಉಂಟು ಮಾಡುತ್ತದೆ ಕಾದು ನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button