Belagavi NewsBelgaum NewsKannada NewsKarnataka News
ಬೆಳಗಾವಿ: 260ಕ್ಕೂ ಹೆಚ್ಚು ಸಿಬ್ಬಂದಿಯಿಂದ ಹಿಡಲಗಾ ಜೈಲಿನ ಮೇಲೆ ದಾಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಲ್ಲಿನ ಹಿಂಡಲಗಾ ಜೈಲಿನ ಮೇಲೆ 260ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ – ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಇಂದು ಬೆಳಗಿನ ಜಾವ ಸುಮಾರು 5 ಗಂಟೆಯಿಂದ ಕಮಿಷನರ್ ಇಡಾ ಯಾರ್ಟಿನ್ ಮಾರ್ಬನಿಂಗ್ ನೇತೃತ್ವದಲ್ಲಿ ಜೈಲಿನ ಮೇಲೆ ದಾಳಿ ನಡೆಸಲಾಯಿತು. 40 ಅಧಿಕಾರಿಗಳು ಮತ್ತು 220ಕ್ಕೂ ಹೆಚ್ಚು ಸಿಬ್ಬಂದಿ ಈ ದಾಳಿ ನಡೆಸಿದರು.
ಮೂರು ಚಾಕುಗಳು, 10 ತಂಬಾಕು ಪೊಟ್ಟಣಗಳು, ಒಂದು ಸಿಗರೇಟು, ಸಣ್ಣ ಹೀಟರ್ ತಂತಿ ಬಂಡಲ್, ಇಟ್ಟಿಗೆಗಳ ಎಲೆಕ್ಟ್ರಿಕ್ ತಾತ್ಕಾಲಿಕ ಒಲೆ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ