Kannada NewsKarnataka News

ಬೆಳಗಾವಿ: ಶೋಭಾ ಸೋಮನಾಚೆ ಮೇಯರ್, ರೇಷ್ಮಾ ಪಾಟೀಲ ಉಪಮೇಯರ್

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಶೋಭಾ ಸೋಮನಾಚೆ ಮತ್ತು ಉಪ ಮೇಯರ್ ಆಗಿ ರೇಷ್ಮಾ ಪಾಟೀಲ ಆಯ್ಕೆಯಾಗಿದ್ದಾರೆ.

ಸೇಮವಾರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಯಿತು. ಸಾಮಾನ್ಯ ವರ್ಗದ ಮಹಿಳೆೆಗೆ ಮೇಯರ್ ಸ್ಥಾನ ಮೀಸಲಾಗಿತ್ತು. ಬಿಜೆಪಿಯ ಶೋಭಾ ಸೋಮನಾಚೆ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಪ್ರಕಟಿಸಿದರು.

 

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯ ರೇಷ್ಮಾ ಪಾಟೀಲ ಮತ್ತು ಪಕ್ಷೇತರ ಸದಸ್ಯೆ ವೈಶಾಲಿ ಭಾತಖಾಂಡೆ ನಾಮಪತ್ರ ಸಲ್ಲಿಸಿದ್ದರು. ರೇಷ್ಮಾ ಪಾಟೀಲ್ ಅವರಿಗೆ 42 ಮತಗಳು, ವೈಶಾಲಿ ಅವರಿಗೆ 4 ಮತಗಳು ಲಭಿಸಿದವು. ರೇಷ್ಮಾ ಪಾಟೀಲ ಉಪಮೇಯರ್ ಎಂದು ಪ್ರಕಟಿಸಲಾಯಿತು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನಾ, ಸ್ಥಳೀಯ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ರಾಜ್ಯ ವಕ್ತಾರ ಎಂ.ಬಿ.ಜಿರಲಿ ಮೊದಲಾದವರು ಭಾನುವಾರ ಸಂಜೆ ಮತ್ತು ಸೋಮವಾರ ಬೆಳಗ್ಗೆ ಸಭೆ ನಡೆಸಿ ಮೇಯರ್, ಉಪಮೇಯರ್ ಕುರಿತು ಚರ್ಚಿಸಿ ನಿರ್ಧರಿಸಿದ್ದರು.

2021ರ ಸೆಪ್ಟಂಬರ್ 3ರಂದು ಪಾಲಿಕೆ ಚುನಾವಣೆ ನಡೆದಿತ್ತು ಆದರೆ ಒಂದೂವರೆ ವರ್ಷ ತಡವಾಗಿ ಮೇಯರ್, ಉಪ ಮೇಯರ್ ಆಯ್ಕೆ ನಡೆದಿದೆ.

 

ಇಂಧನ ವಲಯದಲ್ಲಿ ಭಾರತ ಮುಂಚೂಣಿಯಲ್ಲಿ: ಪ್ರಧಾನಿ ಮೋದಿ

https://pragati.taskdun.com/india-is-at-the-forefront-of-energy-sector-pm-modi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button