*ಆಸ್ತಿಗಾಗಿ ತಮ್ಮನ ಪತ್ನಿಯನ್ನು ಇರಿದು ಕೊಂದ ವ್ಯಕ್ತಿ: ಬೆಚ್ಚಿ ಬಿದ್ದ ಬೆಳಗಾವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಸ್ತಿಗಾಗಿ ತಮ್ಮನ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿ ಆರೋಪಿ ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹಲವು ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆಗಿದ್ದ ಆರೋಪಿ ಬುಧವಾರ ಬೆಳ್ಳಂಬೆಳಗ್ಗೆ ಬೆಳಗಾವಿ ಟಿಳಕವಾಡಿಯ ಮಂಗಳವಾರಪೇಠ್ ನಲ್ಲಿ ಗೀತಾ ಗವಳಿ (45) ಎಂಬ ಮಹಿಳೆಗೆ ಪತಿಯ ಸಹೋದರೆನೆ ಚಾಕು ಇರಿದು ಹತ್ಯೆಗೈದಿದ್ದಾನೆ.
ಆರೋಪಿ ಗಣೇಶ ಗವಳಿ ಎಂಬಾತ ಗೀತಾ ಗವಳಿಗೆ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಚಾಕು ಇರಿತಕ್ಕೆ ಒಳಗಾಗಿ ಮಹಿಳೆ ರಕ್ತದ ಮಡುವಿನಲ್ಲಿ ಒದ್ದಾಡುತಿದ್ದವಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಿಮ್ಸ್ ನಲ್ಲಿ ಗೀತಾ ಸಾವನ್ನಪ್ಪಿದ್ದಾಳೆ.
ಕೊಲೆಯಾದ ಮಹಿಳೆ ಗೀತಾ ಪತಿ ರಂಜಿತ್ ಗವಳಿ ಹಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಅಂದಿನಿಂದ ಪತಿಗೆ ಸೇರಿದ 40×12 ಜಾಗಕ್ಕಾಗಿ ವಿವಾದ ಇತ್ತು. ಆದರೆ ಇಂದು ಬೆಳಗ್ಗೆ ಮಾತಿನ ಚಕಮಕಿ ವೇಳೆಯಲ್ಲಿ ಗೀತಾಳ ಹತ್ಯೆಯಾಗಿದೆ.
ತಮ್ಮನ ಪತ್ನಿಯನ್ನು ಕೊಲೆ ಮಾಡಿ ಸದ್ಯ ಆರೋಪಿ ಗಣೇಶ ಎಸ್ಕೆಪ್ ಆಗಿದ್ದಾನೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.