
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಪ್ರಯುಕ್ತ 33 ಕೆ.ವಿ. ಹಿಂಡಲಗಾ ವಿದ್ಯುತ್ ವಿತರಣಾ ಉಪಕೇಂದ್ರದಿಂದ ವಿತರಣೆಯಾಗುವ ಹಿಂಡಲಗಾ ಪಂಪ್‌ಹೌಸ್, ಗಣೇಶಪೂರ, ಹಿಂಡಲಗಾ, ಗೋಕುಲ ನಗರ, ಸರಸ್ವತಿ ನಗರ, ಲಕ್ಷ್ಮೀ ನಗರ, ವಿಜಯ ನಗರ, ಡಿಫೆನ್ಸ್, ಕಾಲನಿ, ಕ್ರಾಂತಿ ನಗರ, ಮಾಸ್ತಿ ನಗರ, ಶಿವಂ ನಗರ, ಸಂಭಾಜಿ ನಗರ, ಜ್ಯೋತಿ ನಗರ, ರಾಮಘಾಟ ರಸ್ತೆ, ಸಿಂಡಿಕೇಟ ಕಾಲನಿ, ಗೋಜಗಾ ಹಾಗೂ ಅಂಬೇವಾಡಿ ಸುತ್ತ ಮುತ್ತಲಿನ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಾಳೆ (ಮಂಗಳವಾರ) ಬೆಳಗ್ಗೆ 11 ರಿಂದ ಸಾಯಂಕಾಲ 4 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ, ಬೆಳಗಾವಿ, ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.