ಪ್ರಗತಿವಾಹಿನಿ ಸುದ್ದಿ, ಕಬ್ಬೂರ – ಅಮಾವಾಸೆ ಪೂಜೆಗೆಂದು ತೆರಳಿದ್ದ ಯುವಕರಿಬ್ಬರು ಲಾರಿಗೆ ಹಿಂದಿನಿಂದ ಬೈಕ್ ಗುದ್ದಿಸಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಸಮೀಪದ ನಿಪ್ಪಾಣಿ -ಮುದೋಳ ರಾಜ್ಯ ಹೆದ್ದಾರಿಯಲ್ಲಿ ಕಬ್ಬೂರ ಟೋಲ್ ಗೇಟ್ ಹತ್ತಿರ ಟೋಲ್ ಹಣ ಕಟ್ಟಲು ನಿಂತಿದ್ದ ಲಾರಿಗೆ ಬೈಕ್ ಸವಾರರಿಬ್ಬರು ಹಿಂಬದಿಯಿಂದ ಗುದ್ದಿ ಅಪಘಾತವಾಗಿದೆ. ಸ್ಥಳದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆ ಶುಕ್ರವಾರ ರಾತ್ರಿ ೯ರ ವೇಳೆಗೆ ನಡೆದಿದೆ.
ಮೃತರು ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮದ ಸಿದ್ದಾರ್ಥ ಅಶೋಕ ಖೆಮಲಾಪುರೆ(೨೬) ಮತ್ತು ಪ್ರಮೋದ ಕರಿಯಪ್ಪಾ ನಾಯಿಕ(೨೬).
ಸಿದ್ದಾರ್ಥ ಅಶೋಕ ಖೆಮಲಾಪುರೆ ಕಬ್ಬೂರ ಪಟ್ಟಣದಲ್ಲಿ ಅಗ್ರೋ ಅಂಗಡಿ ಇಟ್ಟಿದ್ದರು. ಅಮಾವಾಸೆ ನಿಮಿತ್ಯವಾಗಿ ನಿಪ್ಪಾಣಿ ಸಮೀಪದ ಸ್ತವನಿದಿಗೆ ದೇವರಿಗೆಂದು ಹೋಗಿ ವಾಪಸ್ ತಮ್ಮೂರಿಗೆ ಬರುವಾಗ ಈ ಘಟನೆ ಸಂಭವಿಸಿದೆ.
ಈ ಕುರಿತು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಆರ್.ಆರ್.ಪಾಟೀಲ ಮತ್ತು ಪಿಎಸ್ಐ ಅಶೋಕ ಕುಳ್ಳುರ ಮತ್ತು ಸಿಬ್ಬಂದಿತೆರಳಿದ್ದರು.
ಅಡುಗೆಯವಳೊಂದಿಗೆ ಸೆಲ್ಫಿ: ಶಿಕ್ಷಕ ಅಮಾನತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ