Kannada NewsKarnataka NewsLatest

ನಾಗಾಲ್ಯಾಂಡ್ ಗಡಿಯಲ್ಲಿ ಬೆಳಗಾವಿ ಯೋಧ ಹುತಾತ್ಮ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ನಾಗಾಲ್ಯಾಂಡ್ ಗಡಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಯೋಧರೊಬ್ಬರು ವೀರಮರಣ ಹೊಂದಿದ್ದಾರೆ.
ಗೋಕಾಕ ತಾಲ್ಲೂಕಿನ ಶಿವಾಪುರ ಕೊಣ್ಣೂರ ಗ್ರಾಮದ  ಮಂಜುನಾಥ ಅಪ್ಪಣ್ಣ ಗೌಡಣ್ಣವರ (38) ಸಾವಿಗೀಡಾದವರು.

ನಾಗಾಲ್ಯಾಂಡ್ ಗಡಿಯಲ್ಲಿ ಗಸ್ತು ತಿರುಗುವಾಗ ಅವರ ವಾಹನ ಅಪಘಾತಕ್ಕೀಡಾಗಿ ಸಾವಿಗೀಡಾದರು.

ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ನಲ್ಲಿ ನೇಮಕಗೊಂಡು 18 ವರ್ಷಗಳಿಂದ ನಾಗಲ್ಯಾಂಡ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಚಾಲಕನಿದ್ದು ತಮ್ಮ ಕರ್ತವ್ಯಕ್ಕೆ ಹೋಗುವಾಗ ಅರಣ್ಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇವರ ಪಾರ್ಥಿವ ಶರೀರ ಸೋಮವಾರ ಸಾಯಂಕಾಲ 6ಘಂಟೆ ಸುಮಾರಿಗೆ ಗೋವಾ ಮಾರ್ಗವಾಗಿ ಸ್ವಗ್ರಾಮಕ್ಕೆ ಬರಲಿದೆ. ಪಾರ್ಥೀವ ಶರೀರವನ್ನು ಗೋವಾದಿಂದ ಗೋಕಾಕ ತಾಲ್ಲೂಕಿನ ಕೊಣ್ಣೂರು ಶಿವಾಪೂರ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ.

ಸೇನಾ ವಿಮಾನ ಪತನ; 17 ಯೋಧರ ದುರ್ಮರಣ

Home add -Advt

 

5ನೇ ತರಗತಿಯಿಂದ ಮಕ್ಕಳಿಗೆ ಕಾಂಡೋಂ ಭಾಗ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button