ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಮಾಹಾಮಾರಿಯನ್ನು ಕಟ್ಟಿ ಹಾಕುವುದು ಕಷ್ಟ ಸಾದ್ಯ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಿದೆ. ನಿನ್ನೆ ಇದ್ದವರು ಇಂದು ಇಲ್ಲಾ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದೆ. ಗ್ರಾಮೀಣಪ್ರದೇಶಗಳಲ್ಲಿ ಸೋಮ್ಕು ಕೊಂಚ ಕಡಿಮೆಯಿದೆ. ಈ ರೀತಿಯ ಸಂದರ್ಭದಲ್ಲಿ ಕೊರೊನಾ ಸೋಂಕು ಕಟ್ಟಿ ಹಾಕುವುದು ತೀರಾ ಕಷ್ಟದ ಕೆಲಸ ಎಂದರು.
ಕೊರೊನಾ ನಿಯಂತ್ರಣದ ಸರ್ಕಾರದ ಪ್ರಯತ್ನ ನಿರಂತರವಾಗಿ ಇರಲಿದೆ. ಜನರು ಸರ್ಕಾರದ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಇನ್ನು ತಾವು ಕೂಡ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಂದಿದ್ದಾಗಿ ತಿಳಿಸಿದ ಸಚಿವರು, ನನಗೂ ಕೊರೊನಾ ಇದೆ ಎಂದು ಗೊತ್ತಾದಾಗ ಬದುಕುತ್ತೇನೆ ಎನ್ನುವ ಅನುಮಾನ ಕಾಡಿತ್ತು, ಆದರೆ ಧೈರ್ಯದಿಂದ ನಾನು ಕೊರೊನಾ ಗೆದ್ದು ಬಂದಿರುವೆ. ಇನ್ನು ನನ್ನ ಬಹುತೇಕ ಸ್ನೇಹಿತರು ನನಗೆ ಕರೆ ಮಾಡಿ ತಮ್ಮ ಅನುಭವ ಹೇಳಿದ್ದಾರೆ. ಎರಡು ದಿನಗಳ ಹಿಂದೆ ನನ್ನ ಸ್ನೇಹಿತನಿಗೆ ಸೋಂಕು ತಗುಲಿತ್ತು. ಆದರೆ ಆತನ ಅಜಾಗರೂಕತೆಯಿಂದ ಪ್ರಾಣ ಕಳೆದುಕೊಂಡನು. ಜ್ವರ ಕೆಮ್ಮು ಶೀತ ಬಂದರೆ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ