Kannada NewsKarnataka NewsLatest
ಬೆಮ್ಕೋ ಅಧ್ಯಕ್ಷ ಮದನ್ ಮೋಹನ್ ಪ್ರೇಮ್ ರತನ್ ಜಿ ಮೊಹ್ತಾ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೈಗಾರಿಕೋದ್ಯಮಿ, ಬೆಮ್ಕೋ ಹೈಡ್ರೊಲಿಕ್ಸ್ ಲಿಮಿಟೆಡ್ ಅಧ್ಯಕ್ಷ ಮದನ್ ಮೋಹನ್ ಪ್ರೇಮ್ ರತನ್ ಜಿ ಮೊಹ್ತಾ ಇಂದು ನಿಧನರಾದರು.
ಅವರನ್ನು ಅನಾರೋಗ್ಯ ನಿಮಿತ್ತ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪತ್ನಿ ನಾಲ್ವರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ.
ಬೆಳಗಾವಿಯ ಭಾಗ್ಯನಗರ ಟಿಳಕವಾಡಿಯಲ್ಲಿರುವ ‘ಮೋಹನಂ’ನಲ್ಲಿ ಹಲವು ಗಣ್ಯರು, ಹಿತೈಷಿಗಳು, ಕಾರ್ಮಿಕರು ಹಾಗೂ ಸಿಬ್ಬಂದಿ ಅವರ ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ಶಹಾಪುರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮದನ್ ಮೋಹನ್ ಪ್ರೇಮ್ ರತನ್ ಜಿ ಅತ್ಯಂತ ಹಿರಿಯ ಕೈಗಾರಿಕೋದ್ಯಮಿ ಮತ್ತು ಫಿಲೋಟ್ರೋಪಿಸ್ಟ್ ಆಗಿದ್ದರು.
ಅವರ ನಿಧನಕ್ಕೆ ಹಿರಿಯ ರಾಜಕೀಯ ಮುಖಂಡರು, ಕೈಗಾರಿಕೋದ್ಯಮಿಗಳು ಇನ್ನಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.



