ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.
ಕೊರೊನಾ ಬಗ್ಗೆ ಜನ ಜಾಗೃತಿ ಹಾಗೂ ಸ್ವತ ಪೊಲೀಸ್ ಸಿಬ್ಬಂದಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆನ್ಲೈನ್ನಲ್ಲಿ ‘ಅರೆಸ್ಟ್ ಕೊರೋನಾ’ ಎಂಬ ಅಭಿಯಾನ ಆರಂಭಿಸಿದ್ದು, ಸೋಂಕನ್ನು ಹೇಗೆ ಎದುರಿಸುವುದು ಎಂದು ತಮ್ಮ ಪೊಲೀಸ್ ಸಿಬ್ಬಂದಿಗೆ ಕೆಲ ಟಿಪ್ಸ್ ನೀಡುತ್ತಿದ್ದಾರೆ.
ಪೊಲೀಸ್ ಠಾಣೆಗೆ ನಿತ್ಯವೂ ಸಾಕಷ್ಟು ಜನರು ಬರುವುದರಿಂದ ವೈರಸ್ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಸೋಂಕು ತಗುಲದಂತೆ ಹೇಗೆ ಮುಂಜಾಗ್ರತೆ ವಹಿಸಬಹುದು ಎಂಬುದನ್ನು ಸೂಚಿಸಲಾಗಿದೆ.
* ಪೊಲೀಸ್ ಸಿಬ್ಬಂದಿ ಜಾಗ್ರತೆಯಿಂದ ಇರಬೇಕು
* ಪದೇ ಪದೇ ಕೈ ತೊಳೆಯುತ್ತಿರಬೇಕು
* ಯಾವುದೇ ಜನರು ಠಾಣೆಗೆ ಬಂದರೂ ದೂರದಿಂದಲೇ ಮಾತನಾಡಿಸಬೇಕು
* ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು
* ಅಗತ್ಯ ಇದ್ದರೆ ಮಾತ್ರ ಹೊರಗೆ ಹೋಗಿ. ಇಲ್ಲದಿದ್ದರೆ ಠಾಣೆಯಲ್ಲೇ ಇರಬೇಕು
ಇನ್ನು ಅರೆಸ್ಟ್ ಕೊರೋನಾ ಅಭಿಯಾನದಲ್ಲಿ ಸಾರ್ವಜನಿಕರಲ್ಲೂ ಅರಿವು ಮೂಡಿಸಲು ಇಲಾಖೆ ಮುಂದಾಗಿದೆ. ಜನರಲ್ಲಿ ಮೂಡಿರುವ ಕೆಲ ತಪ್ಪು ತಿಳಿವಳಿಕೆಗಳನ್ನ ನೀಗಿಸಲು ಸೋಷಿಯಲ್ ಮೀಡಿಯಾದಲ್ಲಿ ಜನರ ಜೊತೆ ಸಂವಾದಕ್ಕೆ ಮುಂದಾಗಿದೆ. ಕೊರೋನಾದಿಂದ ಬಚಾವ್ ಆಗಲು ಕೆಲ ಸಲಹೆ ಸೂಚನೆಗಳನ್ನ ಆನ್ಲೈನ್ನಲ್ಲೇ ನೀಡುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ