Karnataka NewsLatestNationalTravel
*ಬೆಂಗಳೂರು-ಮುಂಬಯಿ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ವೇಳಾಪಟ್ಟಿ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬಹುನಿರೀಕ್ಷಿತ KSR ಬೆಂಗಳೂರು – ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಮುಂಬಯಿ) ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ನ ವೇಳಾಪಟ್ಟಿಯನ್ನು ರೈಲ್ವೆ ಬೋರ್ಡ್ ಅಂತಿಮಗೊಳಿಸಿದೆ. CC-180/2026 ಆದೇಶದ ಪ್ರಕಾರ 2 ರೇಕ್ಗಳೊಂದಿಗೆ ಈ ರೈಲು ಶೀಘ್ರದಲ್ಲೇ ಆರಂಭವಾಗಲಿದೆ.
ವೇಳಾಪಟ್ಟಿ ವಿವರ:
ರೈಲು ಸಂಖ್ಯೆ 27652 (ಬೆಂಗಳೂರು -> ಮುಂಬಯಿ) ನಿಲ್ದಾಣ ರೈಲು ಸಂಖ್ಯೆ 27651 (ಮುಂಬಯಿ -> ಬೆಂಗಳೂರು)
ರಾತ್ರಿ 10:00 (ನಿರ್ಗಮನ) KSR ಬೆಂಗಳೂರು ಮಧ್ಯಾಹ್ನ 2:50 (ಆಗಮನ)
ರಾತ್ರಿ 12:50 ಧರ್ಮಾವರಂ ಬೆಳಗ್ಗೆ 11:45
ಬೆಳಗ್ಗೆ 05:05 ವಾಡಿ ಬೆಳಗ್ಗೆ 07:25
ಮಧ್ಯಾಹ್ನ 1:50 (ಆಗಮನ) CSMT ಮುಂಬಯಿ ರಾತ್ರಿ 10:30 (ನಿರ್ಗಮನ)
ಮುಖ್ಯಾಂಶಗಳು:
- ಸಂಚಾರದ ದಿನಗಳು: ವಾರದಲ್ಲಿ 6 ದಿನ. ಬೆಂಗಳೂರಿನಿಂದ ಸೋಮವಾರ ರಜೆ, ಮುಂಬಯಿಯಿಂದ ಮಂಗಳವಾರ ರಜೆ.
- ಮಧ್ಯದ ನಿಲುಗಡೆಗಳು: ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪುರ, ಪುಣೆ, ಕಲ್ಯಾಣ್.
- ಪ್ರಯಾಣ ಅವಧಿ: ಸುಮಾರು 16 ಗಂಟೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




