Latest

ಅಮಲೇರಿಸುವ ಚಾಕೋಲೇಟ್, ಡ್ರಗ್ಸ್ ಜಾಲದಲ್ಲಿ ಹೊಸ ವರಸೆ, ಜನಸಾಮಾನ್ಯರಿಗೆ ನಡುಕ ಹುಟ್ಟಿಸಿದ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ಗಾಂಜಾ, ಅಫೀಮ್ ಚರಸ್, ಹೆರಾಯಿನ್ ಮೊದಲಾದ ಮಾದಕ ವಸ್ತುಗಳ ಜಾಲಕ್ಕೆ ಸಿಲುಕಿ ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಯುವಜನತೆ ನರಳುತ್ತಿದ್ದಾರೆ. ಮಾದಕವಸ್ತುಗಳನ್ನು ಮಾರಾಟ ಮಾಡುವ ಜಾಲವನ್ನು ಪೊಲೀಸರು ಭೇದಿಸಿದಷ್ಟೂ ಅಕ್ರಮ ದಂಧೆಕೋರರು ಹೊಸ ಹೊಸ ಹಾದಿಯಲ್ಲಿ ಸರಬರಾಜು ಮಾಡುವುದು ಕಂಡುಬರುತ್ತಿದೆ.

ಈ ಸಾಲಿನಲ್ಲಿ ಶನಿವಾರ ಬೆಂಗಳೂರಿನ ಮಹಾದೇವಪುರ ಪೊಲೀಸರು ಭೇದಿಸಿದ ಪ್ರಕರಣವೊಂದು ಮೈ ಜುಮ್ಮೆನ್ನಿಸುವಂತಿದೆ. ಜನಸಾಮಾನ್ಯರಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೀಡುಮಾಡುವಂತೆ ಮಾಡಿದೆ.

ಚಾಕೋಲೇಟ್‌ನಲ್ಲಿ ಗಾಂಜಾ

ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಓರಿಸ್ಸಾದ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದಾಗ ಪೊಲೀಸರಿಗೇ ಆಘಾತ ಕಾದಿತ್ತು. ಸಾಮಾನ್ಯವಾಗಿ ಗಾಂಜಾವನ್ನು ಪೌಡರ್ ರೂಪದಲ್ಲಿ ಮಾರಲಾಗುತ್ತದೆ.

ಆದರೆ ಈ ಆರೋಪಿಗಳಿಂದ ವಶಪಡಿಸಿಕೊಂಡ ಗಾಂಜಾ ಚಾಕೋಲೇಟ್ ರೂಪದಲ್ಲಿರುವುದು ಕಂಡು ಪೊಲೀಸರು ಚಕಿತಗೊಂಡಿದ್ದಾರೆ. ಚಾಕೋಲೇಟ್‌ಗೆ ಮೇಲಿಂದ ಗಾಂಜಾ ಕೋಟಿಂಗ್ ಮಾಡಿ ಈ ಖದೀಮರು ಮಾರಾಟ ಮಾಡುತ್ತಿದ್ದರು.

ಆರೋಪಿಗಳಿಂದ ಒಟ್ಟು ೧೮ ಕೆಜಿ ತೂಕದ ೩೨೦೦ ಚಾಕೋಲೇಟ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರಿನ ವೈಟ್ ಫೀಲ್ಡ್ ಡಿಸಿಪಿ ಎಸ್. ಗಿರೀಶ್ ಹೇಳಿದ್ದಾರೆ.

ಭಾರತವನ್ನು ಹೊಗಳಿ ಪಾಕಿಸ್ತಾನವನ್ನು ಉಗಿದು ಉಪ್ಪಿನಕಾಯಿ ಹಾಕಿದ ಅಪಘಾನಿಸ್ತಾನ್; ಪಾಕ್ ಮಾಡಿದ ಲಫಂಗತನವೇನು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button