Kannada NewsKarnataka NewsLatest
*ಏರ್ ಪೋರ್ಟ್ ನಲ್ಲಿ ಬರೋಬ್ಬರಿ 26 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಮಾದಕ ವಸ್ತುಗಳ ಅಕ್ರಮ ಸಾಗಾಟ ಪ್ರಕರಣದಲ್ಲಿ ವಿದೇಶಿ ಮಹಿಳೆಯನ್ನು ಬಂಧಿಸಿರುವ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಬರೋಬ್ಬರಿ 26 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಜಪ್ತಿ ಮಾಡಿದ್ದಾರೆ.
ಕೀನ್ಯಾ ಮೂಲದ ಮಹಿಳೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲು ಸಿದ್ಧಳಾಗಿದ್ದಳು, ಈ ವೇಳೆ ಮಹಿಳೆ ಬ್ಯಾಗ್ ಪರಿಶೀಲಿಸಿದಾಗ 2.6 ಕೆಜಿ ಕೊಕೇನ್ ಪತ್ತೆಯಾಗಿದೆ.
ದೆಹಲಿಗೆ ತೆರಳಲೆಂದು ಮಹಿಳೆ ಚೆಕ್ ಇನ್ ಆಗುತ್ತಿದ್ದಾಗ ಆಕೆಯ ಲಗೇಜ್ ಬ್ಯಾಗ್ ಪರಿಶೀಲಿಸಿದಾಗ ಕೊಕೇನ್ ಇರುವುದು ಗೊತ್ತಾಗಿದೆ. ತಕ್ಷಣ ಆಕೆಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಬರೋಬ್ಬರಿ 26 ಕೋಟಿ ಮೌಲ್ಯದ ಕೊಕೇನ್ ಜಪ್ತಿ ಮಾಡಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.




