ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ಬೆಸ್ಕಾಂ ನಲ್ಲಿ ನೌಕರಿ ಪಡೆದಿದ್ದ ಎಂಜಿನಿಯರ್ ಸೇರಿದಂತೆ 6 ಆರೋಪಿಗಳನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಸ್ಕಾಂ ನಲ್ಲಿ 8 ಜನರು ಉದ್ಯೋಗ ಪಡೆದಿದ್ದರು. ಈ ಪ್ರಕರಣಣದಲ್ಲಿ ಇದೀಗ 6 ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗಿದೆ.
ಬೆಸ್ಕಾಂ ಹುದ್ದೆಗಾಗಿ 30-40 ಲಕ್ಷ ಅಹಣದ ಅವ್ಯವಹಾರವೂ ನಡೆದಿದೆ. ಪ್ರಕರಣದ ಕಿಂಗ್ ಪಿನ್ಬೆಸ್ಕಾಂ ಅಸಿಸ್ಟೆಂಟ್ ಆಡಿಟ್ ಆಫೀಸರ್ ಎಲ್.ರವಿ, ಅಸಿಸ್ಟೆಂಟ್ ಪ್ರೇಮ್ ಕುಮಾರ್, ಸೂಪರಿಂಟೆಂಡಿಂಗ್ ಇಂಜಿನಿಯರ್ ಶಾಂತಮಲ್ಲಪ್ಪ, ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಪಡೆದಿದ್ದ ವಿರೇಶ್, ರಘು ಕಿರಣ್, ಹರೀಶ್, ಜೂನಿಯರ್ ಇಂಜಿನಿಯರ್ ಆಗಿದ್ದ ಶಿವಪ್ರಸಾದ್ ನನ್ನು ಬಂಧಿಸಲಾಗಿದೆ.
ರಕ್ಷಿತ್ ಹಾಗೂ ಕಾರ್ತಿಕ್ ಎಂಬುವವರು ನಾಪತ್ತೆಯಾಗಿದ್ದಾರೆ. ಬೆಸ್ಕಾಂ ಎಇಇ ನಾಗರಾಜ್ ಚಿತ್ರದುರ್ಗದ ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
*ಬಿಹಾರದ ಕೂಲಿ ಕಾರ್ಮಿಕನಿಗೆ 14 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್..!*
https://pragati.taskdun.com/notice-to-pay-14-crore-tax-to-bihar-laborer/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ