ಬೆಸ್ಟ್ ಪ್ರಾಜೇಕ್ಟ್ ಪ್ರಶಸ್ತಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜೀನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಿದ್ಧ ಪಡಿಸಿದ “ಕ್ಲಾಸಿಫಿಕೆಶನ್ ಆಫ ಲಂಗ್ ಡಿಸಿಜಸ ಆಯಂಡ್ ಡಿಟೆಕ್ಷನ್ ಆಫ ಲಂಗ್ ಕ್ಯಾನ್ಸರ್ ಯುಜಿಂಗ್ ಇಮೆಜ್ ಪ್ರೊಸೆಸಿಂಗ್ ರಾಸ್ಪ ಬೇರಿ ಫಿ ಆಯಂಡ್ ಐಒಟಿ” ಪ್ರಾಜೇಕ್ಟ್ ಬೆಸ್ಟ್ ಪ್ರಾಜೇಕ್ಟ್ ಆಫ್ ದಿ ಇಯರ್ ಪ್ರಶಸ್ತಿನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನೀಡಿದೆ.
ನಮ್ಮ ಮಹಾವಿದ್ಯಾಲಯವು 2016-17, 2017-18, 2018-19ನೇ ಸಾಲಿನಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಈ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವ ಶ್ರೇಯ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಪ್ರಾಧ್ಯಾಪಕರಿಗೆ ಸಲ್ಲುತ್ತದೆ ಎಂದು ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪುರೆ ತಿಳಿಸಿದ್ದಾರೆ.
ಬೆಳಗಾವಿಯ ಕೆ.ಎಲ್.ಇ ಎಮ್ ಎಸ್ ಶೇಷಗಿರಿ ಅಭಿಯಾಂತ್ರಿಕ ಕಾಲೇಜಿನಲ್ಲಿ 26 ಮತ್ತು 27ನೇಯ ಜುಲೈ 2019 ರಂದು ಜರುಗಿದ 42ನೇಯ ರಾಜ್ಯಮಟ್ಟದ ಪ್ರದರ್ಶನ ಹಾಗೂ ಅಂತಿಮ ಹಂತದಲ್ಲಿ ಸ್ಪರ್ಧೆಯಲ್ಲಿ ಈ ಪ್ರಶಸ್ತಿಯನ್ನು ಡಾ. ದೇಬಪ್ರಿಯ ದತ್ತಾ, ಮುಖ್ಯಸ್ಥರು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಭಾರತ ಸರ್ಕಾರ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕರಿಗೆ ನೀಡಿದರು.
ವಿದ್ಯಾರ್ಥಿಗಳಾದ ಕು.ಸುಪ್ರಿತಾ ಕಡಕೊಳ, ಕು.ಪೂಜಾ ಕನಸೆ, ಕು.ಪ್ರಿಯಾಂಕಾ ಖೋತ, ಕು.ಪದ್ಮಶ್ರೀ ಪಾಟೀಲ ಸಿದ್ದ ಪಡಿಸಿದ್ದಾರೆ. ಪ್ರೊ. ಪ್ರವೀಣ ಗುರವ ಮಾರ್ಗದರ್ಶನ ನೀಡಿದ್ದರು.
ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ