Film & Entertainment
*ಟಾಲಿವುಡ್ ನಟ-ನಟಿಯರಿಗೆ ಬಿಗ್ ಶಾಕ್: ವಿಜಯ್ ದೇವರಕೊಂಡ,ರಾಣಾ, ನಿಧಿ ಅಗರ್ವಾಲ್ ಸೇರಿ 25 ಜನರ ವಿರುದ್ಧ ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ: ಬೆಟ್ಟಿ ಆಪ್ ಬಗ್ಗೆ ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ ಟಾಲಿವುಡ್ ನ ಘಟಾನುಘಟಿ ನಟ-ನಟಿಯರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ನಟ ಪ್ರಕಾಶ್ ರಾಜ್, ರಾಣಾ ದಗುಬಾಟಿ, ವಿಜಯ್ ದೇವರುಕೊಂಡ, ನಟಿ ಪ್ರಣೀತಾ, ನಿಧಿ ಅಗರ್ವಾಲ್ ಸೇರಿದಂತೆ 25 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಆನ್ ಲೈನ್ ಬೆಟ್ಟಿಂಗ್ ಆಪ್ ಬಗ್ಗೆ ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ 25 ನಟ-ನಟಿಯರ ವಿರುದ್ಧ ಹೈದರಾಬಾದ್ ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಟರಾದ ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ನಟಿಯರಾದ ಮಂಚು ಲಕ್ಷ್ಮೀ, ಪ್ರಣೀತಾ, ನಿಧಿ ಅಗರ್ವಾಲ್, ವರ್ಷಿಣಿ, ಸಿರಿ, ಶ್ರೀಮುಖಿ ಸೇರಿದಂತೆ 25 ನಟ-ನಟಿಯರ ವಿರುದ್ಧ ಕೇಸ್ ದಾಖಲಾಗಿದೆ.