Belagavi NewsBelgaum News
*ಯಲ್ಲಮ್ಮವಾಡಿ ಯಲ್ಲಮ್ಮ ದೇವಸ್ಥಾನಕ್ಕೆ ನುಗ್ಗಿದ ಮಳೆ ನೀರು: ಅರ್ಧದಷ್ಟು ಮುಳುಗಿದ ದೇವಿಯ ಮೂರ್ತಿ*
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮ ದೇವಿ ದೇವಾಸ್ಥಾನ ಜಲಾವೃತಗೊಂಡಿದೆ.
ಕೊಕಟನೂರ ಗ್ರಾಮದ ಹೊರವಲಯದ ಯಲ್ಲಮ್ಮವಾಡಿ ಯಲ್ಲಮ್ಮ ದೇವಸ್ಥಾನಕ್ಕೆ ಮಳೆಯಿಂದಾಗಿ ಜಲದಿಗ್ಬಂಧನ ಹಾಕಿದಂತಾಗಿದ್ದು, ದೇವಸ್ಥಾನಕ್ಕೆ ಮಳೆ ನೀರು ನುಗ್ಗಿ ದೇವಿ ಮೂರ್ತಿ ಅರ್ಧದಷ್ಟು ಮುಳುಗಡೆಯಾಗಿದೆ.
ಎದೆಯ ಮಟ್ಟಕ್ಕೆ ನಿಂತಿರುವ ನೀರಿನಲ್ಲಿಯೇ ಸಾಗಿ ಭಕ್ತರು ದೇವರ ದರ್ಶನ ಪಡೆದು ಬರುತ್ತಿದ್ದಾರೆ. ನಾಳೆ ಹುಣ್ಣಿಮೆಯಿರುವುದರಿಂದ ಇಂದು ಹಾಗೂ ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಾರೆ. ಆದರೆ ಭಾರಿ ಮಳೆಯಿಂದಾಗಿ ದೇವಾಲಯದ ಸುತ್ತಮುತ್ತಲ ಪ್ರದೇಶ ನೀರಿನಿಂದ ತುಂಬಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ