Karnataka NewsLatest

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲಿ: ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ದೇಶ ಸದೃಢಗೊಂಡು ಪ್ರಗತಿಯತ್ತ ಸಾಗಿ ವಿಶ್ವದಲ್ಲಿ ತನ್ನ ಸ್ಥಾನಮಾನ ಗಟ್ಟಿಗೊಳಿಸಲು ಭಾವೀ ನಾಗರಿಕರಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಮೌಲ್ಯಾಧಾರಿತ ಶಿಕ್ಷಣ ನೀಡಬೇಕಿದೆ” ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಹಿರೇ ಬಾಗೇವಾಡಿಯ ಗ್ರುಪ್ ವಿದ್ಯಾವರ್ಧಕ ಸಂಘದ ಕರ್ನಾಟಕ ಸಂಯುಕ್ತ ಪದವಿಪೂರ್ವ ಕಾಲೇಜು, ಕರ್ನಾಟಕ ಬಾಲನಿಕೇತನ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಬಿ‌.ಕೆ. ಇಟಗಿ ರಾಷ್ಟ್ರೀಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಮತ್ತು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ, ಮಾತನಾಡಿದೆ.

ಉನ್ನತ ವಿಚಾರಗಳನ್ನು ಅವರ ಮನಸ್ಸಿನಲ್ಲಿ ತುಂಬುವ ಮೂಲಕ ನಾವೆಲ್ಲರೂ ಭಾರತಾಂಬೆಯ ಮಕ್ಕಳು, ನಾವೆಲ್ಲರೂ ಒಂದೇ, ವಂದೇ ಮಾತರಂ ಜಯಘೋಷದ ಮಂತ್ರ ಪಠಿಸಬೇಕಾಗಿದೆ ಎಂದು ಅವರು ಹೇಳಿದರು.

Home add -Advt

“ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ  ಅವರು ಈ ಶಿಕ್ಷಣ ಸಂಸ್ಥೆಯ ಮೇಲೆ ಅಪಾರವಾದ ಪ್ರೀತಿ ಕಾಳಜಿಯನ್ನು ಹೊಂದಿದ್ದಾರೆ. ಈ ಗ್ರಾಮದ ಎಲ್ಲ ಜನಪ್ರತಿನಿಧಿಗಳು ಈ ಭಾಗದ ಶಾಸಕರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದು, ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಮುಂಬರುವ ದಿನಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳಲಿದ್ದಾರೆ” ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ವ್ಯವಸ್ಥೆಯ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ವಾಗ್ದಾನ ಮಾಡಿದರು.

ಬಡೇಕೊಳ್ಳ ಮಠದ ಸದ್ಗುರು ಶ್ರೀ ನಾಗೇಂದ್ರ ಮಹಾಸ್ವಾಮಿಗಳು ಹಾಗೂ   ತಾರೀಹಾಳದ ಶ್ರೀ ಅಡವೀಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಗ್ರುಪ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ನಿರ್ದೇಶಕ ಎಸ್.ಬಿ.ಇಟಗಿ, ಬಿ‌.ಜಿ.ವಾಲಿಇಟಗಿ, ಸುರೇಶ ಬ. ಇಟಗಿ, ನಸ್ರೀನ್ ಬಾನು ಕರಿದಾವಲ್, ಎಲ್.ಆರ್.ಪಾಟೀಲ, ಪ್ರಕಾಶ ಕಳಸದ, ಯಲ್ಲನಗೌಡ ಪಾಟೀಲ, ಎಸ್.ಆರ್.ದಂಡಿನ, ಐ.ಬಿ.ಅರಳೀಕಟ್ಟಿ, ರಮೇಶ ಬಸರಕೋಡ, ಬಿ.ಡಿ.ಗಣಾಚಾರಿ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

‘ರಾಷ್ಟ್ರೀಯ ಪಕ್ಷ’ದ ಮಾನ್ಯತೆ ಪಡೆಯುವಲ್ಲಿ ಆಪ್ ತುಳಿದ ಹಾದಿಯೆಷ್ಟು? ಇಲ್ಲಿದೆ ಅವಲೋಕನ

https://pragati.taskdun.com/what-is-the-path-of-aap-in-getting-the-recognition-of-national-party-heres-an-overview/

ಯಮಕನಮರಡಿ ಶಾಸಕರು ಭಯದ ವಾತಾವರಣ ನಿರ್ಮಿಸಿ ಮತ ಪಡೆದಿದ್ದಾರೆ – ಕಟೀಲು ಗಂಭೀರ ಆರೋಪ

https://pragati.taskdun.com/yamakanamaradi-mla-got-votes-by-creating-an-atmosphere-of-fear-katilu-is-a-serious-allegation/

*ಅಂತಾರಾಷ್ಟ್ರೀಯ ಪತಂಗ ಉತ್ಸವ: ಗಾಳಿಪಟ ಹಾರಿಸಿ ಸಂಭ್ರಮಿಸಿದ ಸಚಿವೆ ಶಶಿಕಲಾ ಜೊಲ್ಲೆ*

https://pragati.taskdun.com/international-kite-festivalshashikala-jollebelagavinippani/

*ಕೌಜಲಗಿ ಹೊಸ ತಾಲೂಕು ರಚನಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ*

https://pragati.taskdun.com/balachandra-jarakiholikoujalaginew-taluksupport/

Related Articles

Back to top button