Belagavi NewsBelgaum NewsKannada NewsKarnataka NewsLatest

*ಜಗತ್ತಿಗೆ ಪ್ರೇರಣೆ ಭಗವದ್ಗೀತೆ: ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾತ್ಮಾ ಗಾಂಧೀಜಿಯವರು ಜೀವನದಲ್ಲಿ ಯಾವುದಾದರೂ ಗ್ರಂಥದಿಂದ ಪ್ರೇರಣೆ ಪಡೆಯುವುದಾದರೆ ಅದು ಭಗವದ್ಗೀತೆಯಿಂದ ಮಾತ್ರ ಎಂದಿದ್ದರು. ಅಂಥ ಗಾಂಧೀಜಿಯವರು ಏಕೈಕ ಬಾರಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನ ನಡೆದ ಬೆಳಗಾವಿಯಲ್ಲಿ ಭಗವದ್ಗೀತಾ ಅಭಿಯಾನ ನಡೆಯುತ್ತಿರುವುದು ಸಂಯೋಗ ಎಂದು ರಾಜ್ಯಸಭಾ ಸದಸ್ಯ, ಚಿಂತಕ ಸುಧಾಂಶು ತ್ರಿವೇದಿ ತಿಳಿಸಿದರು.

ಬೆಳಗಾವಿ ನಗರದ ಲಿಂಗರಾಜ ಕಾಲೇಜು ಮೈದಾನಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಭಗವದ್ಗೀತಾ ಅಭಿಯಾನ ಹಾಗೂ ಜನಕಲ್ಯಾಣ ಟ್ರಸ್ಟ್ ಬೆಳಗಾವಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ನೀಡುತ್ತಿರುವ ಚಿತ್ರ ನೀತಿ ನಿರೂಪಣೆ ಪುಟದಲ್ಲಿ ಪ್ರಕಟಿಸಲಾಗಿದೆ. ಇದು ಕೇವಲ ಸಾಂಕೇತಿಕವಲ್ಲ. ದೇಶದ ನೀತಿ ನಿರೂಪಣಗೆ ಭಗವದ್ಗೀತೆ ಪ್ರೇರಣೆಯಾಗಬೇಕು ಎಂಬ ಉದ್ದೇಶವಿದೆ ಎಂದರು.

ಮೋದಿಜಿ ಪ್ರದಾನಿಯಾಗಿದ್ದು ಕೇವಲ ಸರಕಾರ ಬದಲಾವಣೆಯ ವಿಷಯವಾಗಿರಲಿಲ್ಲ. ವಿಚಾರಗಳ ಬದಲಾವಣೆಯ ವಿಷಯವಾಗಿತ್ತು. ಅಮೇರಿಕದ ರಾಷ್ಟ್ರಪತಿಗಳಿಗೆ ಭಗವದ್ಗೀತೆ ಉಡುಗೊರೆಯಾಗಿ ನೀಡಿದ್ದರು ಎಂದು ಸುಧಾಂಶು ತ್ರಿವೇದಿ ಹೇಳಿದರು.

ಅಣುಬಾಂಬ್ ಅನ್ವೇಷಣೆ ಮಾಡಿದ ವಿಜ್ಞಾನಿ ರಾಬರ್ಟ್ ಹೈಪನ್‍ಬರ್ಗ್, ವಿಜ್ಞಾನಿ ನೀಲ್ಸ್ ಬೋರ್ ಸೇರಿದಂತೆ ಒಂದು ಡಜನ್‍ಗೂ ಹೆಚ್ಚು ವಿಜ್ಞಾನಿಗಳು ಹಿಂದೂ ಧರ್ಮ ಗೃಂಥಗಳಿಂದ ಪ್ರೇರಣೆ ಪಡೆದಿದ್ದಾರೆ. ಇಂಥ ಧರ್ಮ ಬೇರೆ ಇಲ್ಲ. ಹೀಗೆ ಪ್ರೇರಣೆ ಪಡೆದರಿಗೆ ಹಿಂದೂ ಧರ್ಮ ಸೇರುವಂತೆ ಯಾರೂ ಒತ್ತಾಯಿಸಿಲ್ಲ. ಎಲ್ಲರೂ ಅವರವರ ಧರ್ಮ ಪಾಲನೆ ಮಾಡಲಿ ಎಂಬುದೇ ಹಿಂದೂ ಧರ್ಮದ ತತ್ವ ಎಂದರು.

ವೇದಗಳು ಬರವಣಿಗೆಯಲ್ಲಿ ಇರಲಿಲ್ಲ. ಅದು ಬಾಯಿಂದ ಬಾಯಿಗೆ ಹೇಳುತ್ತ ಬಂದ ಗೃಂಥ ಎಂದು ಕೆಲವರು ಹೇಳುತ್ತಾರೆ. ಬ್ರಹ್ಮಾಂಡವನ್ನೇ ಅಳೆದವರು, ಆಯುರ್ವೇದ ವೈದ್ಯ ಪದ್ಧತಿ ಕಂಡುಹಿಡಿದವರಿಗೆ, ಜಗತ್ತಿಗೆ ಜ್ಞಾನ ಹಂಚಿದವರಿಗೆ ಬರವಣಿಗೆ ಬರುವುದಿಲ್ಲ ಎಂದು ಹೇಳುವವರು ಬುದ್ದಿಗೇಡಿಗಳು. ನಮ್ಮ ಎಲ್ಲ ವೇದಗಳನ್ನು ಛಂದಗಳಲ್ಲಿ ಬರೆಯಲಾಗಿದೆ. ಹಾಗಾಗಿ ಅದು ಬಾಯಿಂದ ಹೇಳಿದಾಗಲೇ ಅದರ ಪ್ರಬಾವ ಅರ್ಥವಾಗುತ್ತದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button